Home ಟಾಪ್ ಸುದ್ದಿಗಳು ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿ; ನಾಲ್ವರು ಸಾವು

ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿ; ನಾಲ್ವರು ಸಾವು

ಕ್ವೀನ್ಸ್ ಲ್ಯಾಂಡ್: ಎರಡು ಹೆಲಿಕಾಪ್ಟರ್ಗಳು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ ಘಟನೆ ಗೋಲ್ಡ್ ಕೋಸ್ಟ್ನ ಸೀ ವರ್ಲ್ಡ್ ಬಳಿ ನಡೆದಿದೆ.


ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಪೊಲೀಸರು ನಾಲ್ವರು ಸಾವನ್ನಪ್ಪಿದ್ದು, ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.


ಸೋಮವಾರ ಹೆಲಿಕಾಪ್ಟರ್ಗಳು ಪರಸ್ಪರ ಢಿಕ್ಕಿಯಾದ ಪರಿಣಾಮ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಒಂದು ಡಜನ್ಗಿಂತಲೂ ಹೆಚ್ಚು ಜನರನ್ನು ಕ್ವೀನ್ಸ್ಲ್ಯಾಂಡ್ ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.


ಢಿಕ್ಕಿಯ ನಂತರ ಒಂದು ಹೆಲಿಕಾಪ್ಟರ್ ಸೀ ವರ್ಲ್ಡ್ ಥೀಮ್ ಪಾರ್ಕ್ ಬಳಿ ಯಶಸ್ವಿಯಾಗಿ ಇಳಿದಿದೆ.

Join Whatsapp
Exit mobile version