Home ಟಾಪ್ ಸುದ್ದಿಗಳು ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಮೂವರಿಗೆ ಗಂಭೀರ ಗಾಯ

ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಮೂವರಿಗೆ ಗಂಭೀರ ಗಾಯ

ನವದೆಹಲಿ: ಸೇನಾ ಹೆಲಿಕಾಪ್ಟರ್ ಎಎಲ್ಎಚ್ ಧ್ರುವ ಪತನಗೊಂಡು ಆಫೀಸರ್ ಸೇರಿ ಮೂವರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ ತ್ವಾರ್ ಜಿಲ್ಲೆಯ ಮರ್ವಾಹ್ ತೆಹಸಿಲ್ನ ಮಚ್ನಾ ಗ್ರಾಮದ ಬಳಿ ನಡೆದಿದೆ.


ಹೆಲಿಕಾಪ್ಟರ್ ನಲ್ಲಿ ಕಮಾಂಡಿಂಗ್ ಆಫೀಸರ್ ಸೇರಿ ಮೂವರು ಪ್ರಯಾಣಿಸುತ್ತಿದ್ದರು. ಎಲ್ಲರೂ ಗಂಭೀರ ಗಾಯಗೊಂಡಿದ್ದಾರೆ ಎಂದು ಎಂದು ತಿಳಿದುಬಂದಿದೆ.


ಇಂದು ಬೆಳಗ್ಗೆ ಕಾಪ್ಟರ್ ಮರ್ವಾ ಕಡೆಗೆ ತೆರಳುತ್ತಿದ್ದಾಗ ಇಂದು ಬೆಳಗ್ಗೆ 9.40 ಕ್ಕೆ ಪತನಗೊಂಡಿದೆ. ಸೇನೆಯ ಸುಧಾರಿತ ಲಘು ಹೆಲಿಕಾಪ್ಟರ್ ಇದಾಗಿದ್ದು, ಪತನಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Join Whatsapp
Exit mobile version