ರಾಯ್ಪುರ: 10 ಮತ್ತು 12ನೇ ತರಗತಿಯ ಟಾಪರ್ ಗಳಿಗೆ ಹೆಲಿಕಾಪ್ಟರ್ ಪ್ರಯಾಣದ ಭರವಸೆಯನ್ನು ನೀಡಿದ್ದ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಶನಿವಾರ ಈ ಭರವಸೆಯನ್ನು ಈಡೇರಿಸಿದ್ದಾರೆ.
ಮೇ 2022 ರಲ್ಲಿ 10 ಮತ್ತು 12ನೇ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಲಿರುವ ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ಸವಾರಿಯನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘೋಷಿಸಿದ್ದರು.
ಶನಿವಾರ ಬೆಳಿಗ್ಗೆ ಸುಮಾರು 125 ವಿದ್ಯಾರ್ಥಿಗಳು ಹೆಲಿಕಾಪ್ಟರ್ ಜಾಯ್ ರೈಡ್ ಅನ್ನು ಆನಂದಿಸಿದ್ದಾರೆ. ಜಾಯ್ ರೈಡ್ ತೆಗೆದುಕೊಂಡ 125 ವಿದ್ಯಾರ್ಥಿಗಳ ಪೈಕಿ, 90 ವಿದ್ಯಾರ್ಥಿಗಳು ಮಾಧ್ಯಮಿಕ ಶಾಲಾ ಪ್ರಮಾಣಪತ್ರ (ಎಸ್ ಎಸ್ ಸಿ) ಪರೀಕ್ಷೆಗಳಲ್ಲಿ ಅಗ್ರಸ್ಥಾನದಲ್ಲಿದ್ದರೆ, 35 ವಿದ್ಯಾರ್ಥಿಗಳು ಹೈಯರ್ ಸೆಕೆಂಡರಿ ಸರ್ಟಿಫಿಕೇಟ್ (ಎಚ್ಎಸ್ ಸಿ) ಪರೀಕ್ಷೆಗಳಲ್ಲಿ ಮೆರಿಟ್ ಹೊಂದಿದ್ದಾರೆ.
ಹೆಲಿಕಾಪ್ಟರ್ ಸವಾರಿ ನೋಡಿ ಮಕ್ಕಳು ಎಷ್ಟು ಸಂತೋಷವಾಗಿದ್ದಾರೆ! ನಾವು 10 ಮತ್ತು 12 ನೇ ತರಗತಿಯ ಟಾಪರ್ ಗಳಿಗೆ ಹೆಲಿಕಾಪ್ಟರ್ ಸವಾರಿಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದೇವೆ ಮತ್ತು ಅದು ಇಂದು ಪ್ರಾರಂಭವಾಗಿದೆ. 125 ವಿದ್ಯಾರ್ಥಿಗಳು ಹೆಲಿಕಾಪ್ಟರ್ ಜಾಯ್ ರೈಡ್ ಅನ್ನು ಆನಂದಿಸಲಿದ್ದಾರೆ ಎಂದು ಸಿಎಂ ಬಘೇಲ್ ಟ್ವೀಟ್ ಮಾಡಿದ್ದಾರೆ.