ಕೊಲಂಬಿಯಾ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಮೇಲೆ ದಾಳಿ

Prasthutha: June 26, 2021

ಕೊಲಂಬಿಯಾದ ಅಧ್ಯಕ್ಷ ಐವನ್‌ ಡೂಕ್ಯು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಮೇಲೆ ಶುಕ್ರವಾರ ನೇರ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ. ಅಧ್ಯಕ್ಷ ಐವನ್‌ ಸಹಿತ ಹೆಲಿಕಾಪ್ಟರ್‌ ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ವೆನೆಝುಲಾದ ಗಡಿಪ್ರದೇಶವಾದ ದಕ್ಷಿಣ ಕಾಟಟುಂಬೊ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಅಧ್ಯಕ್ಷರ ವಿಮಾನಕ್ಕೆ ಇಂತಹ ಅಪರೂಪದ ದಾಳಿ ನಡೆದಿದೆ.

ಹೆಲಿಕಾಪ್ಟರ್‌ ನಲ್ಲಿದ್ದ ರಕ್ಷಣಾ ಸಚಿವ ಡೀಗೊ ಮೊಲಾನೊ, ಗೃಹ ಸಚಿವ ಡೇನಿಯಲ್‌ ಪ್ಯಾಲೆಷಿಯೊ ಮತ್ತು ನಾರ್ಟೆ ಡಿ ಸಾಂಟಂಡೆರ್‌ ರಾಜ್ಯದ ಗವರ್ನರ್‌ ಸಿಲ್ವಾನೊ ಸೆರ್ರಾನೊ ಸೇರಿದಂತೆ ತಾವೂ ಸುರಕ್ಷಿತರಾಗಿದ್ದೇವೆ ಎಂದು ಅಧ್ಯಕ್ಷ ಐವನ್‌ ತಿಳಿಸಿದ್ದಾರೆ. ʼಸುಸ್ಥಿರ ಕಾಟಟುಂಬೊ, ಕಾನೂನು ಬದ್ಧತೆಯೊಂದಿಗೆ ಶಾಂತಿʼ ಎಂಬ ಘೋಷಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಈ ದಾಳಿ ನಡೆದಿದೆ.

ಹೆಲಿಕಾಪ್ಟರ್‌ ನ ಉಪಕರಣಗಳು ಮತ್ತು ಸಾಮರ್ಥ್ಯ ಸಂಭವಿಸಬಹುದಾಗಿದ್ದ ಅಪಾಯವನ್ನು ತಪ್ಪಿಸಿತು ಎಂದು ಐವನ್‌ ಮಾಹಿತಿ ನೀಡಿದ್ದಾರೆ.

ಇಂತಹ ಹೇಡಿಗಳ ದಾಳಿಯಿಂದ ಭಯೋತ್ಪಾದನೆ, ಡ್ರಗ್‌ ಜಾಲ ಮತ್ತು ಸಂಘಟಿತ ಅಪರಾಧಗಳ ವಿರುದ್ಧದ ತನ್ನ ಹೋರಾಟ ನಿಲ್ಲುವುದಿಲ್ಲ. ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಲಂಬಿಯಾ ಯಾವಾಗಲೂ ಪ್ರಬಲವಾಗಿದೆ ಮತ್ತು ಯಾವುದೇ ಬೆದರಿಕೆಗಿಂತ ನಮ್ಮ ಸಂಸ್ಥೆಗಳು ನಮಗೆ ಹೆಚ್ಚು ಎಂದು ಅಧ್ಯಕ್ಷ ಐವನ್‌ ಹೇಳಿದ್ದಾರೆ.

ಅಧ್ಯಕ್ಷರು ಪ್ರಯಾಣಿಸಲಿದ್ದ ನಗರದಲ್ಲಿ ಕೆಲವು ದಿನಗಳ ಮುಂಚೆಯೇ ಭದ್ರತಾ ವೈಫಲ್ಯದ ಘಟನೆ ನಡೆದಿತ್ತು. ಸೇನಾ ನೆಲೆಯೊಂದರ ಮೇಲೆ ಕಾರು ಬಾಂಬ್‌ ದಾಳಿ ನಡೆದಿತ್ತು. ಸುಮಾರು ಮೂವತ್ತಾರು ಮಂದಿ ಗಾಯಗೊಂಡಿದ್ದರು. ದಾಳಿಗೆ ಯಾರು ಕಾರಣ ಎಂಬುದು ಇಲ್ಲಿ ವರೆಗೂ ತಿಳಿದು ಬಂದಿಲ್ಲ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ