Home ಟಾಪ್ ಸುದ್ದಿಗಳು ಆಗಸ್ಟ್ 6 ರವರೆಗೆ ಭಾರೀ ಮಳೆ: ಕರಾವಳಿಗೆ ಆರೆಂಜ್ ಅಲರ್ಟ್

ಆಗಸ್ಟ್ 6 ರವರೆಗೆ ಭಾರೀ ಮಳೆ: ಕರಾವಳಿಗೆ ಆರೆಂಜ್ ಅಲರ್ಟ್

ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಇಂದಿನಿಂದ ಮತ್ತೆ 4 ದಿನಗಳ ಕಾಲ ಮಳೆ ಮುಂದುವರೆಯಲಿದೆ.


ಆಗಸ್ಟ್ 6 ರವರೆಗೆ ರಾಜ್ಯದ ಹಲವೆಡೆ ಉತ್ತಮ ಮಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಹಲವೆಡೆ ಎಡಬಿಡದ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಈ ನಡುವೆ ಇಂದಿನಿಂದ ಆಗಸ್ಟ್ 6 ರವರೆಗೆ ಮತ್ತೆ ಮಳೆ ಮುಂದುವರೆಯಲಿದೆ ಅನ್ನೋ ಮುನ್ಸೂಚನೆಯನ್ನು ಹವಾಮಾನ ತಜ್ಞರು ತಿಳಿಸಿದ್ದಾರೆ.


ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 4ರ ವರೆಗೆ ಆರೆಂಜ್ ಹಾಗೂ 5 ಮತ್ತು 6 ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

Join Whatsapp
Exit mobile version