Home ರಾಷ್ಟ್ರೀಯ ನೇಪಾಳದಲ್ಲಿ ಭಾರಿ ಮಳೆ: 200 ಮಂದಿ ಮೃತ್ಯು

ನೇಪಾಳದಲ್ಲಿ ಭಾರಿ ಮಳೆ: 200 ಮಂದಿ ಮೃತ್ಯು

ಕಠ್ಮಂಡು: ನೇಪಾಳದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರಿ ಮುಂಗಾರು ಮಳೆಯಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ.


ಸದ್ಯ ಮಳೆ ಸ್ವಲ್ಪ ಕಡಿಮೆಯಾಗಿದ್ದು ಅವಶೇಷಗಳಿಂದ 200 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪರಿಹಾರ ಕಾರ್ಯಾಚರಣೆ ತಂಡ ಹೇಳಿದೆ.


ಪೂರ್ವ ಹಾಗೂ ಮಧ್ಯ ನೇಪಾಳದ ಹಲವು ಪ್ರದೇಶಗಳು ಶುಕ್ರವಾರ ದಿಂದಲೂ ಮುಳುಗಡೆಯಾಗಿವೆ. ಕಳೆದ ಎರಡು ದಶಕದಲ್ಲಿ ನೇಪಾಳ ಎದುರಿಸಿದ ಅತಿದೊಡ್ಡ ಪ್ರಾಕೃತಿಕ ವಿಕೋಪ ಇದಾಗಿದೆ.
ನೇಪಾಳದ ಹಲವು ಭಾಗಗಳಲ್ಲಿ ಪ್ರವಾಹ ಉಲ್ಬಣಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.


ರಸ್ತೆಗಳು ಹಾನಿಗೀಡಾಗಿದ್ದು, ಸಂಪರ್ಕ ಕಡಿತದಿಂದಾಗಿ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ.
ಪ್ರವಾಹ, ಭೂಕುಸಿತ, ತಗ್ಗು ಪ್ರದೇಶಗಳ ಮುಳುಗಡೆಯಿಂದಾಗಿ 31 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. 200 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯಾಡಳಿತ ಹೇಳಿದೆ.


ಕಠ್ಮಂಡು ಕಣಿವೆಯಲ್ಲಿ ಒಟ್ಟು 43 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 322 ಮನೆಗಳು ಹಾಗೂ 16 ಸೇತುವೆಗಳು ಹಾನಿಗೊಳಗಾಗಿವೆ. ಭದ್ರತಾ ಸಿಬ್ಬಂದಿಯು 4000 ಜನರನ್ನು ರಕ್ಷಿಸಿದ್ದಾರೆ. 20 ಸಾವಿರ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Join Whatsapp
Exit mobile version