Home ಟಾಪ್ ಸುದ್ದಿಗಳು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಗೆ ಭೂಕುಸಿತ, ಮನೆಗಳು ಧರಾಶಾಹಿ

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಗೆ ಭೂಕುಸಿತ, ಮನೆಗಳು ಧರಾಶಾಹಿ

ಕುಲು: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಲು ಜಿಲ್ಲೆಯ ಅನ್ನಿ ಪಟ್ಟಣದಲ್ಲಿ ಭೂಕುಸಿತದಿಂದ ಹಲವಾರು ಮನೆಗಳು ಏಕಕಾಲದಲ್ಲಿ ನೆಲಸಮವಾಗಿವೆ.


ಇದರ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಗುಡ್ಡದ ಮೇಲೆ ನಿರ್ಮಿಸಲಾಗಿರುವ ಮನೆಗಳು ಧರೆ ಕುಸಿತದಿಂದ ಉದುರಿ ಬೀಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.


ಮಳೆ ಬಿದ್ದ ಹಿನ್ನೆಲೆಯಲ್ಲಿ ಅನ್ನಿ ಪಟ್ಟಣದ ಗುಡ್ಡದ ಮೇಲಿದ್ದ ಮನೆಗಳು ಅಪಾಯದಲ್ಲಿರುವುದನ್ನು ಗುರುತಿಸಲಾಗಿತ್ತು. ವಾರದ ಹಿಂದೆಯೇ ಸ್ಥಳೀಯ ಆಡಳಿತ ನೋಟಿಸ್ ನೀಡಿ, ನಿವಾಸಿಗಳನ್ನು ಖಾಲಿ ಮಾಡಿಸಿತ್ತು. ಹೀಗಾಗಿ ಯಾವುದೇ ಸಾವು – ನೋವುಗಳು ದಾಖಲಾಗಿಲ್ಲ.

Join Whatsapp
Exit mobile version