Home ಟಾಪ್ ಸುದ್ದಿಗಳು ಭಾರೀ ಮಳೆ: ದ.ಕ ಜಿಲ್ಲೆಯ ವಿವಿಧೆಡೆ ಹಾನಿ

ಭಾರೀ ಮಳೆ: ದ.ಕ ಜಿಲ್ಲೆಯ ವಿವಿಧೆಡೆ ಹಾನಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸೋಮವಾರ ಬಿಟ್ಟು ಬಿಟ್ಟು ಉತ್ತಮ ಮಳೆಯಾಗಿದೆ. ಕೆಲವೆಡೆ ಸಣ್ಣಪುಟ್ಟ ಹಾನಿಗಳು ಸಂಭವಿಸಿವೆ.


ಮುಕ್ಕಚೇರಿ ಹನೀಫ್ ರವರ ಮನೆಯ ಆವರಣ ಗೋಡೆ ಕಳೆದ ರಾತ್ರಿ ಜೋರಾದ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.


ಈ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದ್ದು, ಆವರಣ ಗೋಡೆ ಕುಸಿತದಿಂದ ಮನೆಯ ಮೂಲಸೌಕರ್ಯಗಳಿಗೆ ಹೆಚ್ಚಿನ ಹಾನಿ ಉಂಟಾಗದಿದ್ದು, ಸ್ಥಳೀಯರು ಕೂಡಲೇ ನಗರಸಭೆ ಸದಸ್ಯ ಖಲೀಲ್ ಉಳ್ಳಾಲ ಅವರಿಗೆ ಮಾಹಿತಿ ನೀಡಿದರು. ಖಲೀಲ್ ಉಳ್ಳಾಲ ಇವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.


ವಿಟ್ಲ ಕಸಬಾ ಗ್ರಾಮದಲ್ಲಿರುವ ಕುರುಂಬಳ ಎಂಬಲ್ಲಿ ಭಾರೀ ಮಳೆಯಿಂದಾಗಿ ಗುಡ್ಡದ ಒಂದು ಭಾಗ ಕುಸಿದು, ಮನೆಯ ಮೇಲೆ ಬಿದ್ದ ಪರಿಣಾಮ ಮನೆಗೆ ಸಾಕಷ್ಟು ಹಾನಿಯಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆದಲ್ಲಿ ಕುರುಂಬಳ ನಿವಾಸಿ ಕಲಂದರ್ ಅಲಿ ಅವರ ಮನೆ ಮೇಲೆ ಗುಡ್ಡ ಕುಸಿಯುವ ವೇಳೆ, ಮನೆಯಲ್ಲಿ ಮಕ್ಕಳು ಸೇರಿ ಒಟ್ಟು ಏಳು ಮಂದಿ ಇದ್ದರು. ಅವರು ಮನೆಯೊಳಗಡೆ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Join Whatsapp
Exit mobile version