Home ಜಾಲತಾಣದಿಂದ ಬೆಂಗಳೂರಿನ ಭಾರೀ ಮಳೆಗೆ ಮತ್ತೊಂದು ಬಲಿ

ಬೆಂಗಳೂರಿನ ಭಾರೀ ಮಳೆಗೆ ಮತ್ತೊಂದು ಬಲಿ


ಬೆಂಗಳೂರು: ಬೆಂಗಳೂರಿನಲ್ಲಿ ಸುರಿದಿರುವ ಭಾರೀ ಮಳೆಗೆ ಮತ್ತೊಂದು ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸೋಮವಾರ ಬಿದ್ದಿರುವ ಭಾರೀ ಮಳೆಗೆ ಫಕ್ರುದ್ದೀನ್ ಸಾವನ್ನಪ್ಪಿದ್ದಾರೆ. ಘಟನೆ ನೈಸ್ ರಸ್ತೆಯ ಕಾಚೋಹಳ್ಳಿಯ ಅಂಡರ್ ಪಾಸ್ ಬಳಿ ನಡೆದಿದೆ.

ಸೋಮವಾರ ಕೆಲಸ ಮುಗಿಸಿಕೊಂಡು ರಾಮನಗರ ಕಡೆಗೆ ಬೈಕ್‌ನಲ್ಲಿ ಫಕ್ರುದ್ದೀನ್ ತೆರಳುತ್ತಿದ್ದರು. ಈ ವೇಳೆ ಕಾಚೋಹಳ್ಳಿ ಅಂಡರ್ ಪಾಸ್ ಮೇಲಿನ ನೈಸ್ ರೋಡ್ ಮೇಲೆ ಸಂಚರಿಸುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ನೈಸ್ ರಸ್ತೆಯಲ್ಲಿ ಬಿದ್ದಿದ್ದರು. ಬಳಿಕ ಫ್ರಕ್ರುದ್ದೀನ್‌ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version