Home ಕರಾವಳಿ ಕರಾವಳಿಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಕರಾವಳಿಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಅ. 18ರವರೆಗೆ ಭಾರೀ ಮಳೆ ಸಾಧ್ಯತೆ

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ  ಕರಾವಳಿಯಾದ್ಯಂತ ಶನಿವಾರ ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ರಾತ್ರಿ ವೇಳೆಗೆ ಭಾರೀ ಮಳೆ ಸುರಿದಿದ್ದು, ವಿವಿಧ ಕಡೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು.

ಬಂಟ್ವಾಳ, ಬೆಳ್ತಂಗಡಿ,ಸುಳ್ಯ, ಪುತ್ತೂರು ವಿಟ್ಲದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ.

ರಾತ್ರಿ ವೇಳೆ ದಿಢೀರ್‌ ಮಳೆ ಬಂದ ಕಾರಣ ನಗರದ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಕೊಟ್ಟಾರ, ಫೋರ್ತ್‌ಮೈಲ್‌ ಪ್ರದೇಶ ಗಳಲ್ಲಿ ಚ‌ರಂಡಿಯಲ್ಲಿ ನೀರು ತುಂಬಿ ಅಂಗಡಿಗಳಿಗೆ ನುಗ್ಗಿದೆ.  

ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಅ.17 ಮತ್ತು 18 ರಂದು ಭಾರೀ ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Join Whatsapp
Exit mobile version