Home ಟಾಪ್ ಸುದ್ದಿಗಳು ಸಕಲೇಶಪುರದಲ್ಲಿ ಭಾರೀ ಮಳೆ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮಣ್ಣಿನ ರಾಶಿ

ಸಕಲೇಶಪುರದಲ್ಲಿ ಭಾರೀ ಮಳೆ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮಣ್ಣಿನ ರಾಶಿ

►ಶಿರಾಡಿಘಾಟ್’ನಲ್ಲಿ ವಾಹನ ಸಂಚಾರ ಬಂದ್

ಸಕಲೇಶಪುರ: ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಲವೆಡೆ ಭೂಕುಸಿತ ಸಂಭವಿಸಿರುವ ಘಟನೆಗಳು ವರದಿಯಾಗಿವೆ.

ದೊಡ್ಡತಪ್ಲು ಗ್ರಾಮದ ಬಳಿ ಗುಡ್ಡ ಕುಸಿದು, ಚಲಿಸುತ್ತಿದ್ದ ಕಾರಿನ ಮೇಲೆ ಮಣ್ಣಿನ ರಾಶಿ ಬಿದ್ದಿದ್ದು, ಕಾರಿನ ಒಳಗಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ‌. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿಯ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಭೂಕುಸಿತದಿಂದ ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿದೆ.

Join Whatsapp
Exit mobile version