Home ಕರಾವಳಿ ಗಲ್ಫ್ ರಿಟಾಯರೀಸ್ ಎಸೋಸಿಯೇಶನ್ ವತಿಯಿಂದ ಆರೋಗ್ಯ ಮಾಹಿತಿ ಶಿಬಿರ

ಗಲ್ಫ್ ರಿಟಾಯರೀಸ್ ಎಸೋಸಿಯೇಶನ್ ವತಿಯಿಂದ ಆರೋಗ್ಯ ಮಾಹಿತಿ ಶಿಬಿರ

ಮಂಗಳೂರು: ಗಲ್ಫ್ ರಿಟಾಯರೀಸ್ ಎಸೋಸಿಯೇಶನ್ ಮಂಗಳೂರು ವತಿಯಿಂದ ಮಾಸಿಕ ಸಭೆ ಮತ್ತು ಆರೋಗ್ಯ ಮಾಹಿತಿ ಶಿಬಿರ ದಿನಾಂಕ 05.09.2023 ರಂದು ಕಂಕನಾಡಿಯ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು. ಸಂಘಟನೆಯ ಅಧ್ಯಕ್ಷ ಮಿತ್ತೂರು ಹಂಝಾ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಮಾಹಿತಿ ಶಿಬಿರವನ್ನು ಕಂಕನಾಡಿ ಮಸೀದಿ ಖತೀಬ್ ಅಬ್ದುಲ್ ರಹೆಮಾನ್ ಸಹದಿ ಉದ್ಘಾಟಿಸಿದರು.

ಡಾ.ಮೊಹಮ್ಮದ್ ನವಾಜ್ M.D (AN AE)DNB Fellowship to Critical care(JIPMER) ಶಿಬಿರದ ಸಂಪನ್ಮೂಲ ಅಥಿತಿಯಾಗಿ ಭಾಗವಹಿಸಿದರು. ಪಾರ್ಶವಾಯುವಿಗೆ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ವಿವರಣೆ ನೀಡಿ ಸಭಿಕರ ಸಂಶಯಗಳನ್ನು ಪರಿಹರಿಸಿದರು.

ಮುಖ್ಯ ಅಥಿತಿಗಳಾಗಿ ನಿವೃತ್ತ Joint Director Of Prosecution ಚೆಯ್ಯಬ್ಬ ಬ್ಯಾರಿ ಮತ್ತು ಒಮಾನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಮಾಯಬ್ಬ MBBS ಭಾಗವಹಿಸಿದರು. ಅವರು ಗಲ್ಫ್ ಎಸೋಸಿಯೇಷನ್ ಮತ್ತು ಅದರ ಕಾರ್ಯವನ್ನು ಶ್ಲಾಘಿಸಿ ಸೂಕ್ತ ಸಲಹೆಗಳನ್ನು ನೀಡಿದರು. ಕಾರ್ಯದರ್ಶಿ ಅರಬಿ ಶೇಕ್ ಬಶೀರ್ ಸ್ವಾಗತಿಸಿದರೆ, ಜೊತೆ ಕಾರ್ಯದರ್ಶಿ ಯೂಸುಫ್ ಆಲಡ್ಕ ಕಾರ್ಯಕ್ರಮ‌ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಆದಂ ಬ್ಯಾರಿ, ಕೋಶಾಧಿಕಾರಿ ಅನ್ವರ್ ಫಳ್ನೀರ್ ಮತ್ತು ಪ್ರಧಾನ ಸಲಹೆಗಾರರಾದ ನಿವೃತ್ತ ACF ಮಹಮದ್ ಬ್ಯಾರಿ ಬೊಳ್ಳಾಯಿ, ಅಬ್ದುಲ್ಲಾ ಕಂದಕ್, ಸಾದಿಕ್ ಮತ್ತು ಗಲ್ಫ್ ರಿಟಾಯರೀಸ್ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಲವಾರು ಮಂದಿ ಗಲ್ಫ್ ಎಸೋಸಿಯೇಷನ್ ಸದಸ್ಯತ್ವವನ್ನು ಸ್ವೀಕರಿಸಿದರು.

Join Whatsapp
Exit mobile version