Home ಟಾಪ್ ಸುದ್ದಿಗಳು ವಿದ್ಯಾರ್ಥಿನಿ ಮೇಲೆ ಆಸಿಡ್ ಎರಚಿದ ಆರೋಪ: ಮುಖ್ಯ ಶಿಕ್ಷಕ ಅಮಾನತು

ವಿದ್ಯಾರ್ಥಿನಿ ಮೇಲೆ ಆಸಿಡ್ ಎರಚಿದ ಆರೋಪ: ಮುಖ್ಯ ಶಿಕ್ಷಕ ಅಮಾನತು

ಚಿತ್ರದುರ್ಗ: ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕ ಆ್ಯಸಿಡ್ ದಾಳಿ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ರಂಗಸ್ವಾಮಿ ಅಮಾನತುಗೊಳಿಸಿ DDPI ರವಿಶಂಕರರೆಡ್ಡಿ ಆದೇಶ ಹೊರಡಿಸಿದ್ದಾರೆ.


ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಂಗಸ್ವಾಮಿ ಅವರು ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ವಿದ್ಯಾರ್ಥಿನಿ ಮೇಲೆ ಎರಚಿದ ಆರೋಪ ಕೇಳಿ ಬಂದಿತ್ತು.


ಈ ಸಂಬಂಧ ಮುಖ್ಯಶಿಕ್ಷಕನ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಈಗ ಅಮಾನತುಗೊಳಿಸಲಾಗಿದೆ.

Join Whatsapp
Exit mobile version