Home ಟಾಪ್ ಸುದ್ದಿಗಳು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆ.ಎಸ್. ಈಶ್ವರಪ್ಪ ವಿರುದ್ಧ ಸ್ಪರ್ಧೆ: ಆಯನೂರು ಮಂಜುನಾಥ್ ಘೋಷಣೆ

ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆ.ಎಸ್. ಈಶ್ವರಪ್ಪ ವಿರುದ್ಧ ಸ್ಪರ್ಧೆ: ಆಯನೂರು ಮಂಜುನಾಥ್ ಘೋಷಣೆ

►ಶಿವಮೊಗ್ಗದಲ್ಲಿ ಕೋಮುಗಲಭೆಗೆ ದೊಡ್ಡ ಹುನ್ನಾರ ನಡೆದಿದೆ, ಹಿಂದೂ – ಮುಸ್ಲಿಮರು ಎಚ್ಚರದಿಂದಿರಬೇಕು


ಶಿವಮೊಗ್ಗ: ಸದ್ಯದಲ್ಲೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಘೋಷಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ವಿರುದ್ಧ ಸ್ಪರ್ಧೆ ಮಾಡಲು ತಯಾರಾಗಿದ್ದೇನೆ, ಎಷ್ಟು ಬೇಕಾದರು ಸೀರೆ ಬಂಡಲ್ ಬರಲಿ ಎಂದು ಹೇಳಿದ ಅವರು, ಪ್ರಚೋದನೆಯಾಗಿ ಮಾತನಾಡಿದರೆ ಫಲಿತಾಂಶ ನಿಮ್ಮ ಪರ ಬರುತ್ತದೆ ಎಂಬ ಭ್ರಮೆ ಬಿಟ್ಟು ಬಿಡಿ ಎಂದು ಅವರು ನೇರವಾಗಿ ಈಶ್ವರಪ್ಪರ ವಿರುದ್ಧ ಟೀಕಾಪ್ರಹಾರ ನಡೆಸಿದರು.


ಶಿವಮೊಗ್ಗದಲ್ಲಿ ಕೋಮುಗಲಭೆಗೆ ದೊಡ್ಡ ಹುನ್ನಾರ ನಡೆದಿದೆ. ಹಿಂದೂ – ಮುಸ್ಲಿಮರು ಎಚ್ಚರದಿಂದಿರಬೇಕು ಎಂದು ಅವರು ಎಚ್ಚರಿಸಿದರು. ಕೆ ಎಸ್. ಈಶ್ವರಪ್ಪ ಅವರ ವಿರುದ್ಧ ಸ್ಪರ್ಧೆ ಖಚಿತ ಎಂದು ಪ್ರಶ್ನೆಯೊಂದಕ್ಕೆ ಮಂಜುನಾಥ್ ಉತ್ತರಿಸಿದರು.

ಪಕ್ಷದಿಂದ ನನಗೆ ಟಿಕೆಟ್ ಸಿಗುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಇದರ ಹೊರತಾಗಿ ಪಕ್ಷದಲ್ಲಿ ಮಕ್ಕಳ ಪಟ್ಟಿ ಕಂಡುಬರುತ್ತದೆ‌ ಎಂದು ಅವರು ವ್ಯಂಗ್ಯವಾಡಿದರು.

 ಅವರು ಶಿವಮೊಗ್ಗ ಬಿಟ್ಟು ಕದಲುತ್ತಿಲ್ಲ. ನೀವಾಗಲಿ ನಿಮ್ಮ ಮಗನಾಗಲಿ ಚುನಾವಣೆ ನಿಲ್ಲಲಿ. ನಾನು ಚುನಾವಣೆಯಲ್ಲಿ ಲೆಕ್ಕಾ ಕೊಡುತ್ತೇನೆ. ನಿಮ್ಮ ವ್ಯಕ್ತಿತ್ವಕ್ಕೆ ಇಡೀ ಶಿವಮೊಗ್ಗ ಜನರಿಗೆ ಪರಿಚಯ ಮಾಡುತ್ತೇನೆ‌ ಎಂದು ಆಯನೂರು ಅವರು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಗೌರವ ಅವರನ್ನು ಅಪಮಾನ ಮಾಡಿದ್ದಿರಾ. ಅಲ್ಲದೇ ಅವರು ಯಾವುದೇ ಕಾರ್ಯಕ್ರಮಕ್ಕೆ ಭಾಗಿ ಆಗದೆ ಇರುವುದು ನಿಮ್ಮ ಯಡಿಯೂರಪ್ಪ ವಿರೋಧಿಯ‌‌ ನಡೆಯನ್ನು ತೋರುತ್ತಿದೆ. ನಿಮ್ಮ ಈ ವ್ಯಕ್ತಿತ್ವದಿಂದ ಸರ್ಕಾರ ಕಳಂಕ ಬಂದಿದೆ. ನಿಮ್ಮಿಂದ ಇಡೀ ನಗರ ಕಾರ್ಯಕರ್ತರು ಬೇಸರವಾಗಿದೆ. ಕಾರ್ಪೋರೇಟ್ ನರಳುತ್ತಿದ್ದಾರೆ. ನಿಮ್ಮ ಹಣದ ಧೋರಣೆ ಮುಂದೆ ಬಡವರ ಪ್ರತಿನಿಧಿ ಆಗಿ ಪಾಠ ಕಲಿಸುತ್ತೇನೆ ಎಂದರು.

Join Whatsapp
Exit mobile version