ಚಂಡೀಗಡ: ಪಂಜಾಬಿನ ಮುಖ್ಯಮಂತ್ರಿಯಾಗಿ ಭಗವಂತ ಮಾನ್ ಅವರು ಕಟ್ಕರ್ ಕಲನ್ ನಲ್ಲಿ ಪ್ರತಿಜ್ಞೆ ಸ್ವೀಕರಿಸುವುದನ್ನು ಅವರ ಇಬ್ಬರು ಮಕ್ಕಳು ಕಣ್ತುಂಬಿಕೊಂಡರು. ಆದರೆ ಮಾಜಿ ಪತ್ನಿ ಇಂದರ್ ಪ್ರೀತ್ ಕೌರ್ ಆತ ಯಾವಾಗಲೂ ನನ್ನ ಪ್ರಾರ್ಥನೆಯಲ್ಲಿ ಇರುತ್ತಾನೆ ಎಂದು ಮಕ್ಕಳನ್ನು ವಿಮಾನವೇರಿಸಿ ಕಳುಹಿಸಿದ್ದಾರೆ.
ಮಗಳು 21ರ ಸೀರತ್ ಕೌರ್ ಮತ್ತು 17ರ ದಿಲ್ಶನ್ ಮಾನ್. ಇಬ್ಬರಿಗೂ ಇಂದು ಮಧ್ಯಾಹ್ನದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರೆಗೆ ತಂದೆಯ ನೆನಪು ಮಸುಕು ಅಷ್ಟೆ. 2015ರಲ್ಲಿ ಭಗವಂತನಿಂದ ಕೌರ್ ಬೇರೆಯಾಗಿದ್ದಾರೆ. ಅಲ್ಲದೆ ಮಕ್ಕಳಿಬ್ಬರು ಸಹ ತಾಯಿಯ ಜೊತೆಗೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಅದಾದ ಮೇಲೆ ಇಂದರ್ ಪ್ರೀತ್ ಕೌರ್ ಗಂಡನ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲು.
2014ರಲ್ಲಿ ಮಾನ್ ಅವರು ಆಮ್ ಆದ್ಮಿ ಪಕ್ಷದ ಸಂಸದರಾಗಿ ದೆಹಲಿ ಸೇರುತ್ತಲೇ ಗಂಡ ಹೆಂಡತಿ ನಡುವೆ ಅದು ಸರಿ ಬರಲಿಲ್ಲ. 2015ರಲ್ಲಿ ವಿಚ್ಛೇದನಕ್ಕೆ ಇಬ್ಬರೂ ಅರ್ಜಿ ಹಾಕಿದರು. ಇಂದರ್ ಪ್ರೀತ್ ಕೌರ್ ಮಕ್ಕಳೊಡನೆ ಅಮೆರಿಕಕ್ಕೆ ಹೊರಟು ಹೋದರು.
ಭಗವಂತ ಮಾತ್ರ ಇಡೀ ಪಂಜಾಬ್ ಈಗ ನಮ್ಮ ಕುಟುಂಬ ಎಂದಿದ್ದಾರೆ. ಕಳೆದ ಏಳು ವರುಷಗಳಿಂದ ಮಕ್ಕಳ ಶಿಕ್ಷಣ ಮತ್ತು ತನ್ನ ಕೆಲಸ ಎಂದು ಇಂದರ್ ಪ್ರೀತ್ ಅವರಿಗೆ ಪುರುಸೊತ್ತು ಇಲ್ಲ. ಈಗ ಮಕ್ಕಳು ಸದ್ಯ ಮುಖ್ಯಮಂತ್ರಿ ಆದ ತಂದೆಗೆ ವಿಶ್ ಮಾಡಿ ವಾಪಸು ಹೋಗಲು ಬಂದಿದ್ದಾರೆ.
ಮಾನ್ ಆಗಾಗ ಫೇಸ್ ಬುಕ್ ನಲ್ಲಿ ನಾನು ನನ್ನ ಮಕ್ಕಳನ್ನು ಮಿಸ್ ಮಾಡಿಕೊಂಡಿದ್ದೇನೆ ಎಂದು ಬರೆಯುತ್ತಿರುತ್ತಾರೆ. ಪತ್ನಿ ಬಗ್ಗೆ ಏನೂ ಬರೆದುದಿಲ್ಲ. ವಿಚ್ಛೇದನ ಕಾಲದಲ್ಲಿ ನನ್ನ ಎರಡು ಕುಟುಂಬದಲ್ಲಿ ನಾನು ನನ್ನ ಪಂಜಾಬನ್ನು ಆಯ್ಕೆ ಮಾಡಿಕೊಂಡೆ ಎಂದು ಭಗವಂತ ಹೇಳಿದ್ದು ಉಲ್ಲೇಖನೀಯ.