Home Uncategorized ಡಿಕೆಶಿಗೆ ಹೆಚ್ಡಿಕೆ ಆಫರ್​: ವ್ಯಂಗ್ಯ ಬಿಟ್ಟರೆ ಬೇರೇನೂ ಗೊತ್ತಿಲ್ಲದ ಕುಮಾರಸ್ವಾಮಿ ಎಂದ ಸಿದ್ದರಾಮಯ್ಯ

ಡಿಕೆಶಿಗೆ ಹೆಚ್ಡಿಕೆ ಆಫರ್​: ವ್ಯಂಗ್ಯ ಬಿಟ್ಟರೆ ಬೇರೇನೂ ಗೊತ್ತಿಲ್ಲದ ಕುಮಾರಸ್ವಾಮಿ ಎಂದ ಸಿದ್ದರಾಮಯ್ಯ

ಮೈಸೂರು: ಕುಮಾರಸ್ವಾಮಿ ಶನಿವಾರ ಡಿಸಿಎಂ ಡಿ.ಕೆ. ಶಿವಕುಮಾರ್​​ಗೆ ಕೊಟ್ಟ ಮುಖ್ಯಮಂತ್ರಿ ಆಫರ್​ ಬಗ್ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಅವರಿಗೆ ವ್ಯಂಗ್ಯ ಬಿಟ್ಟರೆ ಬೇರೇನು ಗೊತ್ತಿಲ್ಲ ಎಂದಿದ್ದಾರೆ.

ಮೈಸೂರಿನ ತಮ್ಮ ನಿವಾಸದಲ್ಲಿ ಸಿಎಂ ಮಾತನಾಡಿದರು.ಅವರದು ವ್ಯಂಗ್ಯದ ಹೇಳಿಕೆ. ಅದರಲ್ಲಿ ವ್ಯಂಗ್ಯ ಬಿಟ್ಟರೇ ಬೇರೆ ಏನೂ ಇಲ್ಲ. ಖುದ್ದು ಡಿ.ಕೆ. ಶಿವಕುಮಾರ್ ಅವರೇ ಅದನ್ನು ವ್ಯಂಗ್ಯ ಎಂದು ಹೇಳಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ವಿಚಾರದಲ್ಲಿ ಇನ್ಮುಂದೆ ಯಾರು ಹೇಳಿಕೆ ನೀಡಬೇಡಿ‌ ಎಂದು ನಮ್ಮ ಶಾಸಕರು ಮತ್ತು ಸಚಿವರಿಗೆ ತಿಳಿಸಿದ್ದೇನೆ‌ ಎಂದ ಸಿಎಂ ಸಿದ್ದರಾಮಯ್ಯ, ನಿನ್ನೆ ಉಪಹಾರ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಮುಂದಿನ ಚುನಾವಣೆ ಬಗ್ಗೆಯೂ ಕೆಲವು ನಿರ್ದೇಶನ ನೀಡಿದ್ದೇನೆ‌ ಎಂದು ಹೇಳಿದರು.

ಶನಿವಾರ ಡಿಕೆಶಿ​ ಸಿಎಂ ಆಗುವುದಾದರೇ ಜೆಡಿಎಸ್​ನ 19 ಶಾಸಕರ ಬೆಂಬಲವಿದೆ ಎಂದು ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸ್ಪಂದಿಸಿದ

Join Whatsapp
Exit mobile version