ಕೋಲಾರ: ಬಿಜೆಪಿಯು ಮೋದಿ ಮತ್ತು ಅಮಿತ್ ಶಾ ಅವರ ಪಕ್ಷವೇ ಹೊರತು ವೀರಶೈವರ ಪಕ್ಷವಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಮುಳಬಾಗಿಲಿನಲ್ಲಿ ನಡೆದ ಪಕ್ಷದ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿಯು ರಾಜ್ಯವನ್ನು ಆಳ್ವಿಕೆ ನಡೆಸುತ್ತಿಲ್ಲ, ದೆಹಲಿಯಿಂದ ಬರುವ ಲಕೋಟೆಯ ಆಧಾರದಲ್ಲಿ ಆಗಿದೆ. ಬಿಜೆಪಿಯು ಈಗ ವೀರಶೈವ ಲಿಂಗಾಯತ ಸಮುದಾಯದವರ ಪಕ್ಷವಾಗಿ ಉಳಿದಿಲ್ಲ. ಇದು ಅಮಿತ್ ಶಾ, ಮೋದಿ ಪಕ್ಷ ಎಂದು ಹೇಳಿದರು.
‘ಜನರ ಭಾವನೆಗಳಿಗೆ ಸ್ಪಂದಿಸುತ್ತಿರುವ ಪ್ರಾದೇಶಿಕ ಪಕ್ಷ ಬೇಕೋ? ರಾಜ್ಯದ ಸಂಪತ್ತು ಲೂಟಿ ಮಾಡುತ್ತಿರುವ, ಅಹಂಕಾರದಿಂದ ಮೆರೆಯುತ್ತಿರುವ ರಾಜಕೀಯ ಪಕ್ಷಗಳು ಬೇಕೋ? ಎಂಬುದನ್ನು ಜನರೇ ತೀರ್ಮಾನಿಸಬೇಕು’ ಎಂದರು.
‘ಯಡಿಯೂರಪ್ಪ ಅವರನ್ನು ಅರ್ಧದಲ್ಲೇ ಮನೆಗೆ ಕಳುಹಿಸಿದರು. ವೀರಶೈವರಿಗೆ ಸಿಕ್ಕಿದ ನ್ಯಾಯ ಇದೇನಾ? ಈಗ ಬಸವರಾಜ ಬೊಮ್ಮಾಯಿ ಇದ್ದಾರೆ. ಆದರೆ,,ಅವರು ಮುಖ್ಯಮಂತ್ರಿ ಎಂಬುದೇ ಹಲವರಿಗೆ ಗೊತ್ತಿಲ್ಲ’ ಎಂದು ಲೇವಡಿ ಮಾಡಿದರು.