Home ಟಾಪ್ ಸುದ್ದಿಗಳು ಅಕ್ರಮ ವಿದ್ಯುತ್ ಸಂಪರ್ಕ: ದಂಡ ಪಾವತಿಸಿದ ಹೆಚ್’ಡಿ ಕುಮಾರಸ್ವಾಮಿ

ಅಕ್ರಮ ವಿದ್ಯುತ್ ಸಂಪರ್ಕ: ದಂಡ ಪಾವತಿಸಿದ ಹೆಚ್’ಡಿ ಕುಮಾರಸ್ವಾಮಿ

ಬೆಂಗಳೂರು: ದೀಪಾಲಂಕಾರಕ್ಕೆ ಬೀದಿದೀಪದ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣ ಸಂಬಂಧ ಬೆಸ್ಕಾಂ ವಿಧಿಸಿದ 68,526 ರೂ. ದಂಡದ ಮೊತ್ತವನ್ನು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಪಾವತಿಸಿದ್ದಾರೆ.


ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಬೆಸ್ಕಾಂ 2.5 ಕಿಲೋ ವ್ಯಾಟ್ಗೆ ಲೆಕ್ಕ ತೆಗೆದುಕೊಂಡಿದೆ. 7 ದಿನಕ್ಕೆ 71 ಯೂನಿಟ್ ಆಗಲಿದೆ ಅಂತ ಕೊಟ್ಟಿದ್ದಾರೆ. ಬೆಸ್ಕಾಂ ಪ್ರಕಾರ, 2,526 ರೂ. ಬಿಲ್ ಬರಬೇಕಿತ್ತು. ಆದರೆ, 68,526 ರೂ. ಕರೆಂಟ್ ಬಿಲ್ ನೀಡಿದೆ. ಹೀಗಾಗಿ ಕರೆಂಟ್ ಬಿಲ್ ಬಗ್ಗೆ ಪುನರ್ ಪರಿಶೀಲನೆ ಮಾಡಲು ಹೇಳಿದ್ದಾಗಿ ತಿಳಿಸಿದರು.

Join Whatsapp
Exit mobile version