Home ಟಾಪ್ ಸುದ್ದಿಗಳು ದುಬೈಗೆ ತೆರಳಿದ ಹೆಚ್ ಡಿ ಕುಮಾರಸ್ವಾಮಿ

ದುಬೈಗೆ ತೆರಳಿದ ಹೆಚ್ ಡಿ ಕುಮಾರಸ್ವಾಮಿ

ದೇವನಹಳ್ಳಿ (ಬೆಂಗಳೂರು) : ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣ ಬೆಳೆಸಿದರು. ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆ ಪತ್ನಿ ಅನಿತಾ ಕುಮಾರಸ್ವಾಮಿಯವರೂ ಜೊತೆಯಲ್ಲಿ ದುಬೈಗೆ ತೆರಳಿದರು.


ದುಬೈಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಬೈನಲ್ಲಿ ಕೆಂಪೇಗೌಡರ ಸಂಘದ ಸಭೆ ಇದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದೇನೆ. ಬೇರೇನೂ ವಿಷಯ ಇಲ್ಲ ಎಂದು ಹೇಳಿದರು.

Join Whatsapp
Exit mobile version