Home ಟಾಪ್ ಸುದ್ದಿಗಳು ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಹೆಚ್ ಡಿ ಕುಮಾರಸ್ವಾಮಿ ಕೈವಾಡ: ಡಿಕೆ ಸುರೇಶ್

ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಹೆಚ್ ಡಿ ಕುಮಾರಸ್ವಾಮಿ ಕೈವಾಡ: ಡಿಕೆ ಸುರೇಶ್

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಕೈವಾಡ ಇದೆ ಎಂದು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.


ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಡಿಯೋ ಬಿಡುಗಡೆ ಹಿಂದೆ ಮೈತ್ರಿ ನಾಯಕರು ಹಾಗೂ ಹೆಚ್ ಡಿ ಕುಮಾರಸ್ವಾಮಿ ಕೈವಾಡ ಇದೆ. ಹೆಣ್ಣು ಮಕ್ಕಳಿಗೆ ಅನ್ಯಾಯ ಆಗಿರುವ ಬಗ್ಗೆ ಗಮನ ಹರಿಸಬೇಕಿದೆ. ಈ ಕೇಸ್ ಬಗ್ಗೆ ಹಾಸನ ಜಿಲ್ಲೆಯಲ್ಲಿ ಮೊದಲೇ ಗುಸುಗುಸು ಇತ್ತು. ಹಾಗೆಂದು ವೀಡಿಯೋ ನೋಡಿದವರು ಯಾರೂ ಇರಲಿಲ್ಲ. ನ್ಯಾಯಾಲಯದ ತಡೆಯಾಜ್ಞೆ ತಂದಾಗ ಅದು ಖಚಿತ ಆಗಿದೆ. ಪೆನ್ ಡ್ರೈವ್ ಬಿಡುಗಡೆಯಾದಾಗ ಬಹಿರಂಗವಾಗಿ ಚರ್ಚೆ ಆಗಿದೆ. ಈ ವಿಡಿಯೋ ಹಿಂದೆ ಹಾಸನ ಜಿಲ್ಲಾ ನಾಯಕರ ಕೈವಾಡ ಇದೆ ಎಂದರು.

Join Whatsapp
Exit mobile version