Home ಟಾಪ್ ಸುದ್ದಿಗಳು ಅನಿವಾಸಿ ಭಾರತೀಯರಿಗೆ ಸೌದಿ ಅನುಮೋದಿತ ಕೋವಿಡ್ ಲಸಿಕೆಯ ವ್ಯವಸ್ಥೆಗೆ ಹೈಕೋರ್ಟ್ ಮೊರೆ

ಅನಿವಾಸಿ ಭಾರತೀಯರಿಗೆ ಸೌದಿ ಅನುಮೋದಿತ ಕೋವಿಡ್ ಲಸಿಕೆಯ ವ್ಯವಸ್ಥೆಗೆ ಹೈಕೋರ್ಟ್ ಮೊರೆ

ಕೊಚ್ಚಿ: ಸೌದಿ ಅರೇಬಿಯಾದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನಿವಾಸಿ ಭಾರತೀಯರಿಗೆ ಕೋವ್ಯಾಕ್ಸಿನ್ ಬದಲು ಕೋವಿಶೀಲ್ಡ್ ಲಸಿಕೆ ಹಾಕಿಸಲು ಅನುಮತಿ ಕೋರಿ ಕೇರಳ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯವು ಈ ವಿಷಯದಲ್ಲಿ ಕೇಂದ್ರ ಮಧ್ಯಸ್ಥಿಕೆಯ ಅಗತ್ಯತೆ ಹಿನ್ನೆಲೆಯಲ್ಲಿ ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 9 ಕ್ಕೆ ಮುಂದೂಡಿತು.
ಕೇರಳದ ಕಣ್ಣೂರಿನ ನಿವಾಸಿ ಗಿರಿಕುಮಾರ್ ತೆಕ್ಕನ್ ಕುನ್ನುಂಪುರತ್ ಎಂಬವರು ಈ ಕುರಿತು ಕೇರಳ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಭಾರತದಲ್ಲಿ ನೀಡುತ್ತಿರುವ ಕೋವ್ಯಾಕ್ಸಿನ್ ಸೌದಿ ಅರೇಬಿಯಾದಿಂದ ಮಾನ್ಯತೆ ಪಡೆದಿಲ್ಲ. ಆಗಸ್ಟ್ 30 ರಂದು ಅವರು ಸೌದಿ ಅರೇಬಿಯಾಕ್ಕೆ ಮರಳದೇ ಇದ್ದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವ್ಯಾಕ್ಸಿನ್ ಬದಲು ಕೋವಿಶೀಲ್ಡ್ ಲಸಿಕೆಗೆ ಅವಕಾಶ ನೀಡುವಂತೆ ಅವಕಾಶವನ್ನು ಕೋರಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದಾರೆ.

ಜನವರಿಯಲ್ಲಿ ಭಾರತಕ್ಕೆ ಮರಳಿರುವ ಗಿರಿಕುಮಾರ್ ಅವರು ಸರ್ಕಾರದ ಆದೇಶದಂತೆ ಕೋವ್ಯಾಕ್ಸಿನ್ ಪಡೆದಿದ್ದಾರೆ. ಆದರೆ ಸೌದಿ ಅರೇಬಿಯಾ ಅನುಮೋದಿಸದ ಲಸಿಕೆ ಹಾಕಿಸಿದ ಕಾರಣದಿಂದ ಸೌದಿ ಪ್ರಯಾಣಕ್ಕೆ ನಿರ್ಬಂಧ ಹೇರುವ ಸಾಧ್ಯತೆಯಿಂದಾಗಿ ಕೋವಿಶೀಲ್ಡ್ ಲಸಿಕೆ ಮರು ಹಾಕಿಸಲು ಅರ್ಜಿ ಸಲ್ಲಿಸಿದ್ದಾರೆ.

Join Whatsapp
Exit mobile version