ಕಸಾಪ ಚುನಾವಣೆ ಎರಡು ತಿಂಗಳೊಳಗೆ ನಡೆಸಲು ಹೈಕೋರ್ಟ್​ ಆದೇಶ

Prasthutha|

ಧಾರವಾಡ:  ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಪದಾಧಿಕಾರಿಗಳ ಚುನಾವಣೆಯನ್ನು ಎರಡು ತಿಂಗಳೊಳಗೆ ನಡೆಸುವಂತೆ ಧಾರವಾಡ ಹೈಕೋರ್ಟ್ ಪೀಠ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿ ಪಾಟೀಲ್​ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿ, ನ್ಯಾಯಾಲಯ ಈ ಸೂಚನೆ ನೀಡಿದೆ.

ಕೋವಿಡ್ ಸೋಂಕಿನ ಹೆಚ್ಚಳದ ಹಿನ್ನೆಲೆಯಲ್ಲಿ 2021 ರ ಮೇ 9 ರಂದು ನಡೆಯಬೇಕಿದ್ದ ಕಸಾಪ ಚುನಾವಣೆಯನ್ನು ಮುಂದೂಡಲಾಗಿತ್ತು. ಇದೀಗ ಕರೊನಾ ಸೋಂಕು ತಗ್ಗಿದ್ದು, ಮೂರು ಪಾಲಿಕೆ ಚುನಾವಣೆಗಳೂ ನಡೆದಿವೆ. ಎಲ್ಲ ಚುನಾವಣೆ ನಡೆಯುವಾಗ ಇದಕ್ಕೇಕೆ ತಡೆ ಅಂತ ಶೇಖರಗೌಡ ಮಾಲಿ ಪಾಟೀಲ್​​ ಅವರು ಹೈಕೋರ್ಟ್​ಗೆ ಮೊರೆಹೋಗಿದ್ದರು.

- Advertisement -

ಒಂದೂವರೆ ತಿಂಗಳ ಹಿಂದೆಯೇ ಸರಕಾರಕ್ಕೆ ಚುನಾವಣೆ ನಡೆಸುವಂತೆ ಮನವಿ ಸಲ್ಲಿಸಿದ್ದರೂ, ಸರ್ಕಾರದಿಂದ ಯಾವುದೇ ಸ್ಪಂದನೆ ಬಂದಿಲ್ಲ ಎಂದು ಮಾಲಿ ಪಾಟೀಲ್ ಹೇಳಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, 2 ತಿಂಗಳಳೊಗೆ ಕಸಾಪ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ.

- Advertisement -