Home ಟಾಪ್ ಸುದ್ದಿಗಳು ರಾಜ್ಯದಲ್ಲಿ ಇನ್ನುಮುಂದೆ ಟ್ರಾಫಿಕ್ ಪೊಲೀಸರಿಗೆ ‘ಬಾಡಿ ಕ್ಯಾಮೆರಾ’ ಕಡ್ಡಾಯ: ಹೈಕೋರ್ಟ್ ಸೂಚನೆ

ರಾಜ್ಯದಲ್ಲಿ ಇನ್ನುಮುಂದೆ ಟ್ರಾಫಿಕ್ ಪೊಲೀಸರಿಗೆ ‘ಬಾಡಿ ಕ್ಯಾಮೆರಾ’ ಕಡ್ಡಾಯ: ಹೈಕೋರ್ಟ್ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಇನ್ನುಮುಂದೆ ಟ್ರಾಫಿಕ್ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಟ್ರಾಫಿಕ್ ಪೊಲೀಸರ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆ ಬಾಡಿ ಕ್ಯಾಮೆರಾ ಧರಿಸುವಂತೆ ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಲಾಗಿದೆ .

ಈ ಕುರಿತು ಹೈಕೋರ್ಟ್ ವಿಭಾಗಿಯ ಪೀಠ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದು, ಬೆಂಗಳೂರಿನಲ್ಲಿ ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ ಜಾರಿಗೊಳಿಸಿ ಕರ್ತವ್ಯದ ವೇಳೆ ಬಾಡಿ ಕ್ಯಾಮೆರಾ ಧರಿಸಲು ಸೂಚಿಸಬೇಕು ಎಂದು ಹೇಳಿದೆ.

ಪೊಲೀಸ್ ಇಲಾಖೆಯಲ್ಲಿ ಇದುವರೆಗೆ 1097 ಬಾಡಿ ಕ್ಯಾಮರಾ ಖರೀದಿಸಲಾಗಿದೆ. ಅಲ್ಲದೇ ಒಟ್ಟು 2680 ಬ್ಯಾಡಿ ಕ್ಯಾಮೆರಾಗಳನ್ನು ಖರೀದಿ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಖರೀದಿಸಿದ ಕ್ಯಾಮೆರಾವನ್ನು ಕಡ್ಡಾಯವಾಗಿ ಬಳಸುವಂತೆ ಸೂಚನೆ ನೀಡಿದೆ.

Join Whatsapp
Exit mobile version