ತಲೆಗೆ ತೆಂಗಿನ ಕಾಯಿ ಬಿದ್ದು ಮಗು ಸಾವು

Prasthutha|

ಹಾವೇರಿ: ಮನೆಯ ಅಂಗಳದಲ್ಲಿ ಮಗುವನ್ನು ಆಟವಾಡಿಸುತ್ತಾ ಊಟ ಮಾಡಿಸುತ್ತಿದ್ದ ವೇಳೆ ತೆಂಗಿನ ಕಾಯಿ ತಲೆಯ ಮೇಲೆ ಬಿದ್ದು 11 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಂಸಭಾವಿಯಲ್ಲಿ ನಡೆದಿದೆ.

- Advertisement -

ಮೃತಪಟ್ಟ ಮಗುವನ್ನು ಹಂಸಭಾವಿಯ ಮಲ್ಲಿಕಾರ್ಜುನ ಮತ್ತು ಮಾಲಾ ದಂಪತಿಗಳ ಮಗು ಎಂದು ಗುರುತಿಸಲಾಗಿದೆ. ಮನೆಯ ಅಗಳದಲ್ಲಿ ಮಗುವನ್ನು ಆಟವಾಡಿಸುತ್ತಾ ಊಟ ಮಾಡಿಸುತ್ತಿದ್ದ ವೇಳೆ ಈ ದಾರುಣ ಘಟನೆ ಸಂಭವಿಸಿದೆ.

ಘಟನೆ ನಡೆದ ತಕ್ಷಣವೇ ಮಗುವನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಊರೇ ಶೋಕಾಚರಣೆಯಲ್ಲಿ ಮುಳುಗಿದೆ.



Join Whatsapp