Home ಟಾಪ್ ಸುದ್ದಿಗಳು ಹತ್ರಾಸ್ ಕಾಲ್ತುಳಿತ: 6 ಮಂದಿಯ ಬಂಧನ

ಹತ್ರಾಸ್ ಕಾಲ್ತುಳಿತ: 6 ಮಂದಿಯ ಬಂಧನ

►ತಲೆ ಮರೆಸಿಕೊಂಡ ಪ್ರಮುಖ ಆರೋಪಿ ಪತ್ತೆಗೆ ₹1 ಲಕ್ಷ ಬಹುಮಾನ

ಲಕ್ನೋ: 123 ಜನರ ಸಾವಿಗೆ ಕಾರಣವಾದ ಹತ್ರಾಸ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಮತ್ತು ನಾಲ್ಕು ಪುರುಷರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ.


ಪ್ರಮುಖ ಆರೋಪಿ ಪ್ರಕಾಶ್ ಮಧುಕರ್ ಬಂಧನಕ್ಕೆ ಸಹಾಯ ಮಾಡುವವರಿಗೆ ₹1 ಲಕ್ಷ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದಾರೆ.

ಬಂಧಿತರು ‘ಸೇವಾದಾರರು’ (ಸತ್ಸಂಗ ಸ್ವಯಂಸೇವಕರು) ಎಂದು ಪೊಲೀಸರು ತಿಳಿಸಿದ್ದಾರೆ.

“ಕಾಲ್ತುಳಿತ ಸಂಭವಿಸಿದಾಗ ಈಗ ಬಂಧಿಸಲಾಗಿರುವ ಆರು ಸೇವಕರು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದರು. ಪ್ರಮುಖ ಆರೋಪಿ ಪ್ರಕಾಶ್ ಮಧುಕರ್ ಬಂಧನಕ್ಕೆ ₹1 ಲಕ್ಷ ಬಹುಮಾನ ಘೋಷಿಸಲಾಗಿದೆ. ಶೀಘ್ರದಲ್ಲೇ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಲಿದೆ. ಪಿತೂರಿಯಿಂದ ಈ ಘಟನೆ ಸಂಭವಿಸಿದ್ದರೆ ನಾವು ತನಿಖೆ ನಡೆಸುತ್ತೇವೆ ಎಂದು ಐಜಿ (ಅಲಿಗಢ ರೇಂಜ್) ಶಲಭ್ ಮಾಥುರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Join Whatsapp
Exit mobile version