ಹತ್ರಾಸ್: ಟ್ರಕ್ ಡಿಕ್ಕಿ, 6 ಕನ್ವರ್ ಭಕ್ತರು ದಾರುಣ ಸಾವು

Prasthutha|

ಲಕ್ನೋ:  ಹರಿದ್ವಾರದಿಂದ ಗ್ವಾಲಿಯರ್ ಗೆ ಮರಳುತ್ತಿದ್ದ ಕನ್ವರ್ ಭಕ್ತರ ಮೇಲೆ ಶನಿವಾರ ಮುಂಜಾನೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಹತ್ರಾಸ್ ನ ಸದಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ 2.15 ರ ಸುಮಾರಿಗೆ ಏಳು ಕನ್ವರ್ ಭಕ್ತರಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕನ್ವರ್ ಭಕ್ತರು ಹರಿದ್ವಾರದಿಂದ ಗ್ವಾಲಿಯರ್ ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಪರಾರಿಯಾದ ಚಾಲಕನ ಬಗ್ಗೆ ದೊರೆತ  ಮಾಹಿತಿಯನ್ನಾಧರಿಸಿ ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಗ್ರಾ ವಲಯ) ರಾಜೀವ್ ಕೃಷ್ಣ ಹೇಳಿದ್ದಾರೆ.



Join Whatsapp