Home ಟಾಪ್ ಸುದ್ದಿಗಳು ದ್ವೇಷ ಭಾಷಣ ಪ್ರಕರಣ: ಪಿ.ಸಿ.ಜಾರ್ಜ್ ಗೆ ಹೈಕೋರ್ಟ್ ಜಾಮೀನು

ದ್ವೇಷ ಭಾಷಣ ಪ್ರಕರಣ: ಪಿ.ಸಿ.ಜಾರ್ಜ್ ಗೆ ಹೈಕೋರ್ಟ್ ಜಾಮೀನು

ಕೊಚ್ಚಿ: ದ್ವೇಷ ಭಾಷಣ ಪ್ರಕರಣದಲ್ಲಿ ಜೈಲಿನಲ್ಲಿರುವ ಪೂಂಞಾರ್ ಮಾಜಿ ಶಾಸಕ ಪಿ.ಸಿ.ಜಾರ್ಜ್ ಅವರಿಗೆ ಜಾಮೀನು ನೀಡಲಾಗಿದೆ. ವಯಸ್ಸು ಮತ್ತು ಆರೋಗ್ಯ ಸ್ಥಿತಿಯ ಆಧಾರದ ಮೇಲೆ ಹೈಕೋರ್ಟ್ ಜಾಮೀನು ನೀಡಿದೆ.

ದ್ವೇಷದ ಭಾಷಣಗಳನ್ನು ಪುನರಾವರ್ತಿಸಬಾರದು ಎಂಬ ಷರತ್ತಿನೊಂದಿಗೆ ನ್ಯಾಯಾಲಯ ಜಾಮೀನು ನೀಡಿದೆ. ನ್ಯಾಯಮೂರ್ತಿ ಪಿ. ಗೋಪಿನಾಥ್ ಜಾರ್ಜ್ ಗೆ ಜಾಮೀನು ನೀಡಿದರು. ಪ್ರಸ್ತುತ ಜಾರ್ಜ್ ಅವರನ್ನು ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ವೆನ್ನಾಲಾ ದ್ವೇಷ ಭಾಷಣ ಪ್ರಕರಣದಲ್ಲೂ ಅವರಿಗೆ ಜಾಮೀನು ನೀಡಲಾಗಿದೆ.

Join Whatsapp
Exit mobile version