ಸುರತ್ಕಲ್ ಜನಜಾಗೃತಿ ಸಭೆಯಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: ತೀವ್ರ ಆಕ್ರೋಶ

Prasthutha|

ಮಂಗಳೂರು: ಸುರತ್ಕಲ್ ನಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾ ವಾಹಿನಿ, ಸುರತ್ಕಲ್ ಪ್ರಖಂಡ ವತಿಯಿಂದ ಏರ್ಪಡಿಸಿದ್ದ ಜನಜಾಗೃತಿ ಸಭೆಯಲ್ಲಿ ಚೈತ್ರಾ ಕುಂದಾಪುರ ಎಂಬಾಕೆ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -


“ನಮಗೂ ಮತಾಂತರ ಮಾಡಲು ಗೊತ್ತು, ನಮಗೂ ನಿಮ್ಮ ಹೆಣ್ಣು ಮಕ್ಕಳನ್ನು ಮದುವೆಯಾಗಲು ಗೊತ್ತು. ಕೇವಲ ಶೇ.23ರಷ್ಟಿರುವ ನೀವೇ ಇಷ್ಟು ಅಹಂಕಾರದಿಂದ ಹಾರಾಡಬೇಕಾದರೆ ಶೇಕಡಾ 70ರಷ್ಟಿರುವ ಹಿಂದೂಗಳಿಗೆ ಇನ್ನೆಷ್ಟು ಹಾರಾಟ ನಡೆಸಬೇಕು. ಮನಸ್ಸು ಮಾಡಿದರೆ ಶೇಕಡಾ 23ರಷ್ಟಿರುವ ಮುಸ್ಲಿಮರನ್ನು ಮತಾಂತರ ಮಾಡಲು ಕೇವಲ ಎರಡೇ ದಿನ ಸಾಕು ಎಂದು ದ್ವೇಷ ಭಾಷಣ ಮಾಡಿದ್ದಳು.


ಈ ಹಿಂದೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಹಿಂದುತ್ವ ಸಂಘಟನೆಗಳ ಎರಡು ಗುಂಪುಗಳ ಮಧ್ಯೆ ಸಂಘರ್ಷವೇರ್ಪಟ್ಟು ಮಾರಾಮಾರಿ ನಡೆದಿತ್ತು. ಈ ವೇಳೆ ಚೈತ್ರಾ, ತನ್ನ ಚೈನ್ ಕಳವಾಯಿತೆಂದು ಅಸಭ್ಯ ಭಾಷೆ ಬಳಸಿದ ಬೈಗುಳದ ವೀಡಿಯೋ ವೈರಲ್ ಆಗಿತ್ತು.

Join Whatsapp
Exit mobile version