Home ಕರಾವಳಿ ಉಳ್ಳಾಲ ಕ್ಷೇತ್ರದಲ್ಲಿ ದ್ವೇಷ ರಾಜಕಾರಣವು ಹದ್ದು ಮೀರಿದೆ: ಮಿಸ್ರಿಯಾ ಕಣ್ಣೂರು

ಉಳ್ಳಾಲ ಕ್ಷೇತ್ರದಲ್ಲಿ ದ್ವೇಷ ರಾಜಕಾರಣವು ಹದ್ದು ಮೀರಿದೆ: ಮಿಸ್ರಿಯಾ ಕಣ್ಣೂರು

ಉಳ್ಳಾಲ: ಮಂಗಳೂರು(ಉಳ್ಳಾಲ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟೆಕಾರ್,ತಲಪಾಡಿ,ಸೋಮೇಶ್ವರ SDPI ಮಹಿಳಾ ನಾಯಕಿಯರ ಸಮ್ಮಿಲನ ಕಾರ್ಯಕ್ರಮವು ಕೆ.ಸಿ ನಗರ ದಲ್ಲಿ ನಡೆಯಿತು.


ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ಸೆಲೀಮಾ ಬಿ ಪನೀರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಉಪಾದ್ಯಕ್ಷೆ ಮಿಸ್ರಿಯಾ ಕಣ್ಣೂರು ಮಾತನಾಡಿ, ಉಳ್ಳಾಲ ಕ್ಷೇತ್ರದಲ್ಲಿ ದ್ವೇಷ ರಾಜಕಾರಣವು ಹದ್ದು ಮೀರಿದ್ದು ಕುತಂತ್ರ ರಾಜಕೀಯದ ಪರಿಣಾಮ ನಮ್ಮ ಮನೆಯ ಮಕ್ಕಳು ಜೈಲಿನಲ್ಲಿ ಕೊಳೆಯಬೇಕಾದ ಪರಿಸ್ಥಿತಿ ಬಂದಿದೆ.
ಉಳ್ಳಾಲ ಕ್ಷೇತ್ರದಲ್ಲಿ ಇಂತಹ ದ್ವೇಷ ರಾಜಕೀಯಕ್ಕೆ ಪೂರ್ಣ ವಿರಾಮ ಹಾಕಬೇಕಾಗಿದ್ದು, ನೀವು SDPI ಪಕ್ಷಕ್ಕೆ ಹಾಕುವ ಪ್ರತಿಯೊಂದು ಮತಗಳೂ ನಿಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ ಎಂದು ತಿಳಿಸಿದರು.


ಈ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರು ಉಳ್ಳಾಲ ಕ್ಷೇತ್ರದಲ್ಲಿ SDPI ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಯವರನ್ನು ಭರ್ಜರಿಯಾಗಿ ವಿಜಯಗೊಳಿಸಲು ಕಾರ್ಯ ಪ್ರವೃತ್ತರಾಗಬೇಕು ಎಂದು ಹೊಸದಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಮಹಿಳೆಯರಿಗೆ ಕರೆ ಕೊಟ್ಟರು.


ಕಾರ್ಯಕ್ರಮದಲ್ಲಿ ತಲಪಾಡಿ ಗ್ರಾಮಪಂಚಾಯತ್ ಸದಸ್ಯೆಯರಾದ ಶಮೀಮ, ಸುಮಯ್ಯ ಹಾರೂನ್ ಹಾಗೂ ತಲಪಾಡಿ,ಕೋಟೆಕಾರ್,ಸೋಮೇಶ್ವರ SDPI ಮಹಿಳಾ ನಾಯಕಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಶ್ಫಾನ ಶಕೀಲ್ ಸ್ವಾಗತಿಸಿ,ರೆಹಮತ್ ಕೆಸಿ ನಗರ ವಂದಿಸಿದರು.

Join Whatsapp
Exit mobile version