ಹಾಸನ | ಪ್ಲೈವುಡ್ ತುಂಬಿದ್ದ ಲಾರಿ ಪಲ್ಟಿ: ಮಂಗಳೂರಿನ ಯುವಕ ಮೃತ್ಯು

- Advertisement -

ಹಾಸನ: ಪ್ಲೈವುಡ್ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕ್ಲೀನರ್ ವೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ.

- Advertisement -


ಮೃತ ಯುವಕನನ್ನು ಮಂಗಳೂರಿನ ಬಣತಾಡಿ ಗ್ರಾಮದ ಉಮ್ಮರ್ ಸಲ್ಮಾನ್ ಫಾರಿಶ್ (18) ಎಂದು ಗುರುತಿಸಲಾಗಿದೆ.


ಪ್ಲೈವುಡ್ ತುಂಬಿದ್ದ ಲಾರಿ ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ ಎನ್ನಲಾಗಿದೆ.

- Advertisement -


ಘಟನೆಯ ಬಗ್ಗೆ ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -


Must Read

Related Articles