Home ಟಾಪ್ ಸುದ್ದಿಗಳು ಹರಿಯಾಣ: ತ್ರಿವರ್ಣ ಧ್ವಜ ಖರೀದಿಸುವಂತೆ ಒತ್ತಾಯ; ರೇಷನ್ ಡಿಪೋ ಮಾಲೀಕನ ಲೈಸನ್ಸ್ ಅಮಾನತು

ಹರಿಯಾಣ: ತ್ರಿವರ್ಣ ಧ್ವಜ ಖರೀದಿಸುವಂತೆ ಒತ್ತಾಯ; ರೇಷನ್ ಡಿಪೋ ಮಾಲೀಕನ ಲೈಸನ್ಸ್ ಅಮಾನತು

ಕಾರ್ನಾಲ್: ‘ಹರ್ ಘರ್ ತಿರಂಗಾ’ ಅಭಿಯಾನದಡಿ ಜನರು ಪಡಿತರದೊಂದಿಗೆ ರಾಷ್ಟ್ರಧ್ವಜವನ್ನು ಖರೀದಿಸುವಂತೆ ಒತ್ತಾಯಿಸುತ್ತಿದ್ದ ಪಡಿತರ ಡಿಪೋ ಮಾಲಿಕರ ಪರವಾನಗಿಯನ್ನು  ಅಧಿಕಾರಿಗಳು ಅಮಾನತುಗೊಳಿಸಿದ ಘಟನೆ ಹರಿಯಾಣದ ಕಾರ್ನಾಲ್ ಜಿಲ್ಲೆಯಲ್ಲಿ ನಡೆದಿದೆ.

ಕಾರ್ನಾಲ್ ಜಿಲ್ಲೆಯ ಹೆಮ್ಡಾ ಗ್ರಾಮದ ಪಿಡಿಎಸ್ ಅಂಗಡಿಯಲ್ಲಿ 20 ರೂ.ಗಳ ತ್ರಿವರ್ಣ ಧ್ವಜ  ಖರೀದಿಸುವಂತೆ ಜನರಿಗೆ ಒತ್ತಾಯಿಸುತ್ತಿದ್ದು, ಇಲ್ಲದಿದ್ದರೆ ಪಡಿತರ ಸಿಗುವುದಿಲ್ಲ ಎಂದು ಬೆದರಿಸುತ್ತಿದ್ದರು ಎಂದು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದ ತಕ್ಷಣ, ಅವರ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಕಾರ್ನಾಲ್ ನ ಉಪ ಆಯುಕ್ತ ಅನೀಶ್ ಯಾದವ್ ಹೇಳಿದ್ದಾರೆ.

Join Whatsapp
Exit mobile version