Home ಟಾಪ್ ಸುದ್ದಿಗಳು ಹರ್ಷ ಸಹೋದರಿ ಮೇಲೆ ಸಿಟ್ಟು: ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಾಳೆ ಹಿಂದೂ ಜಾಗರಣ ವೇದಿಕೆ...

ಹರ್ಷ ಸಹೋದರಿ ಮೇಲೆ ಸಿಟ್ಟು: ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಾಳೆ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ


ಶಿವಮೊಗ್ಗ: ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷ ಸಹೋದರಿ ಅಶ್ವಿನಿ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿ ಮಾಡಿದ ಸಂದರ್ಭ ಗದರಿಸಿ ಹೊರಗಡೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಶಿವಮೊಗ್ಗದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ಹಮ್ಮಿಕೊಂಡಿದೆ.


ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತದ ಸಹ ಸಂಯೋಜಕ ಸತೀಶ್ ದಾವಣಗೆರೆ, ಪರಪ್ಪನ ಆಗ್ರಹಾರದಲ್ಲಿ ಹರ್ಷನ ಕೊಲೆ ಮಾಡಿದವರು ಮೊಬೈಲ್ ಬಳಸಿಕೊಂಡು ರಾಜ್ಯಾತಿಥ್ಯದಲ್ಲಿದ್ದಾರೆ. ಅವರು ಜೈಲಿನಿಂದಲೇ ತಮ್ಮ ಕುಟುಂಬದವರೂಂದಿಗೆ ಮಾತನಾಡಿಕೊಂಡು ಸಂತೋಷವಾಗಿದ್ದಾರೆ. ಜೈಲಿನೊಳಗೆ ಈ ರೀತಿಯಾಗಿ ಇರುವವರು ಇನ್ನೂ ಹೊರಗೆ ಬಂದರೆ ಹೇಗೆ ಇರ್ತಾರೆ ಎಂಬ ಪ್ರಶ್ನೆ ಕಾಡಲು ಪ್ರಾರಂಭಿಸಿದೆ ಎಂದರು.


ಇದೇ ವೇಳೆ ಮಾತನಾಡಿದ ಕೊಲೆಯಾದ ಹರ್ಷನ ಸಹೋದರಿ ಅಶ್ವಿನಿ, ನಮ್ಮ ತಮ್ಮನ ಕೊಲೆಗಾರರಿಗೆ ಶಿಕ್ಷೆ ಆಗಬೇಕು. ಆಗಲೇ ನಮೆಲ್ಲ ನೆಮ್ಮದಿ. ಆದರೆ, ಸರ್ಕಾರವೇ ನಮ್ಮನ್ನು ನಿರ್ಲಕ್ಷಿಸಿದರೆ ಹೇಗೆ ಎಂದು ಅಶ್ವಿನಿ ಪ್ರಶ್ನೆ ಮಾಡಿದರು.

Join Whatsapp
Exit mobile version