Home ಟಾಪ್ ಸುದ್ದಿಗಳು ಮೇಯರ್ ಸುಧೀರ್ ಶೆಟ್ಟಿಯ ದ್ವೇಷದ ಬಲೆಗೆ ಸಾಮರಸ್ಯದ ಮತ್ಸ್ಯ ಸಿಲುಕಲಾರದು: ಕೆ.ಅಶ್ರಫ್

ಮೇಯರ್ ಸುಧೀರ್ ಶೆಟ್ಟಿಯ ದ್ವೇಷದ ಬಲೆಗೆ ಸಾಮರಸ್ಯದ ಮತ್ಸ್ಯ ಸಿಲುಕಲಾರದು: ಕೆ.ಅಶ್ರಫ್

ಮಂಗಳೂರು: ಲೋಕಸಭೆ ಚುನಾವಣೆಯ ಪ್ರಚಾರಾರ್ಥ ಮಂಗಳೂರಿನ ಬಿಜೆಪಿ ಕಚೇರಿಯ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮತ್ತು ಮೇಯರ್ ಸುಧೀರ್ ಶೆಟ್ಟಿ ಮಂಗಳೂರಿನ ಮುಸ್ಲಿಮ್ ಮತ್ಸ್ಯ ವ್ಯಾಪಾರಿಗಳು ಮತ್ತು ಮೊಗವೀರ ಸಮುದಾಯದ ಮದ್ಯೆ ಮತೀಯ ದ್ವೇಷ ಹಂಚಲು ಪ್ರಯತ್ನಿಸಿದ್ದಾರೆ. ಇದು ಚುನಾವಣೆ ಹತ್ತಿರ ಬರುವಾಗ ಬಿಜೆಪಿಯ ಎಂದಿನ ಚಾಳಿಯೇ ಆಗಿರುತ್ತದೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.


ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಮಂಗಳೂರಿನ ಧಕ್ಕೆಯಲ್ಲಿ ವಿಭಿನ್ನ ಸಮುದಾಯದ ಜನರು ಅದೆಷ್ಟೋ ವರ್ಷಗಳಿಂದ ಸೌಹಾರ್ಧ ಯುತ ವ್ಯವಹಾರ ನಡೆಸಿಕೊಂಡು ಬರುತ್ತಿರುವುದು ಮಂಗಳೂರಿನ ಮತ್ತು ಜಿಲ್ಲೆಯ ಮತ್ಸೋಧ್ಯಮವೇ ಸಾಕ್ಷಿ. ಇಲ್ಲಿ ಮೀನುಗಾರರಿಗೆ ಯಾವುದೇ ಮತೀಯ ದ್ವೇಷ ಇಲ್ಲ. ಪರಸ್ಪರ ಸಹಕಾರ ಕೊಡು ಕೊಳ್ಳುವಿಕೆ ಇಲ್ಲಿನ ಶಾಶ್ವತ ಧರ್ಮ. ಈ ಹಿಂದೆ ಈದ್ ರಜೆಯ ವಿಷಯದಲ್ಲಿ ಸ್ಥಳೀಯ ಸ್ವಯಂ ಘೋಷಿತ ಪುಡಾರಿ ಒಬ್ಬ ಮುಸ್ಲಿಮರ ಮತ್ತು ಮೊಗವೀರರ ಮಧ್ಯೆ ದ್ವೇಷ ಬಿತ್ತಲು ಪ್ರಯತ್ನಿಸಿ ವಿಫಲವಾಗಿದ್ದು, ಈಗ ಹಾಲಿ ಮೇಯರ್ ಸುಧೀರ್ ಶೆಟ್ಟಿ ದ್ವೇಷವೆಂಬ ಬಲೆಯಲ್ಲಿ ಮಂಗಳೂರಿನ ಸಾಮರಸ್ಯದ ಮತ್ಸ್ಯವನ್ನು ಹಿಡಿಯಲು ಹೋದರೆ ಮಂಗಳೂರಿನ ಜನತೆ ಸುಧೀರ್ ಶೆಟ್ಟಿಯಂತಹ ಅವಿವೇಕಿ ಅಲ್ಲ ಎಂದು ತಿಳಿಯುವುದು ಒಳಿತು.


ಮಂಗಳೂರಿನ ಧಕ್ಕೆಯ ಸೌಹಾರ್ದತೆ ಕರ್ನಾಟಕದ ಇಡೀ ಜನತೆಗೆ ಮಾದರಿ ಆಗಿದೆ ಎಂದು ತಿಳಿಯಲಿ. ಚುನಾವಣೆ ಪ್ರಚಾರದಲ್ಲಿ ಸುಧೀರ್ ಶೆಟ್ಟಿ ಮತ್ತು ಅಭ್ಯರ್ಥಿ ಕೋಮು ರಹಿತ ವಿಷಯಗಳನ್ನು ಜನರಲ್ಲಿ ಪ್ರಸ್ತಾಪಿಸಿ ಮತ ಯಾಚಿಸಲಿ ಎಂದು ಹೇಳಿದ್ದಾರೆ.

Join Whatsapp
Exit mobile version