Home ಟಾಪ್ ಸುದ್ದಿಗಳು ಟಿಪ್ಪು ನರಭಕ್ಷಕ ಎಂದ ಜಗದೀಶ್ ಶೆಟ್ಟರ್: ಟಿಪ್ಪುವಿನ ಪೋಷಾಕು ಧರಿಸಿ ಪೋಸು ನೀಡಿದ ಶೆಟ್ಟರ್ ಚಿತ್ರ...

ಟಿಪ್ಪು ನರಭಕ್ಷಕ ಎಂದ ಜಗದೀಶ್ ಶೆಟ್ಟರ್: ಟಿಪ್ಪುವಿನ ಪೋಷಾಕು ಧರಿಸಿ ಪೋಸು ನೀಡಿದ ಶೆಟ್ಟರ್ ಚಿತ್ರ ಹಂಚಿಕೊಂಡ ಹರಿಪ್ರಸಾದ್

ಬೆಂಗಳೂರು: ಟಿಪ್ಪು ಒಬ್ಬ ನರಭಕ್ಷಕ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅವರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಟಿಪ್ಪುವಿನ ಪೋಷಾಕು ಧರಿಸಿ ಪೋಸು ನೀಡಿದ್ದನ್ನು ಮರೆತಿರಬೇಕು ಎಂದು ಬಿ.ಕೆ. ಹರಿಪ್ರಸಾದ್ ಟ್ವೀಟ್ ಮಾಡಿದ್ದು, ಈ ಹಿಂದೆ ಶೆಟ್ಟರ್ ಟಿಪ್ಪುವಿನ ಪೋಷಾಕು ಧರಿಸಿದ ಚಿತ್ರವನ್ನು ಅಪ್ ಲೋಡ್ ಮಾಡಿದ್ದಾರೆ.
ಚಿತ್ರಗಳು ಬರೀ ಮಾತಾಡುವುದಿಲ್ಲ ಶೆಟ್ಟರ್ ಅವರೇ, ಸತ್ಯವನ್ನ ಬೆತ್ತಲೆ ಕೂಡ ಮಾಡುತ್ತದೆ. ಕೋಮುವಾದದ ಕನ್ನಡಕ ಕಳಚಿಟ್ಟು ಓದುವುದಾದರೇ ತಾವೇ ಸಿಎಂ ಆಗಿದ್ದಾಗ ಪ್ರಕಟಿಸಿರುವ ಪುಸ್ತಕ ಕಳಿಸಿಕೊಡಬೇಕಾ? ಎಂದು ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

Join Whatsapp
Exit mobile version