Home ಕರಾವಳಿ ಹರೇಕಳ: ಗ್ರಾಮ ಪಂಚಾಯತ್ ನ ನೂತನ ಹರಾಜು ನೀತಿಗೆ SDPI ವಿರೋಧ

ಹರೇಕಳ: ಗ್ರಾಮ ಪಂಚಾಯತ್ ನ ನೂತನ ಹರಾಜು ನೀತಿಗೆ SDPI ವಿರೋಧ

ಮಂಗಳೂರು: ಹರೇಕಳ ಗ್ರಾಮ ಪಂಚಾಯತ್ ವಾಣಿಜ್ಯ ಕಟ್ಟಡದ ಹರಾಜು ಪ್ರಕ್ರಿಯೆಯ ಬಗ್ಗೆ ಇತ್ತೀಚೆಗೆ ನೂತನ ನೀತಿಯನ್ನು ರೂಪಿಸಿದ್ದು, SDPI ತೀವ್ರ ವಿರೋಧ ವ್ಯಕ್ತಪಡಿಸಿದೆ.


ಈ ಹೊಸ ನೀತಿಯು ಅಸಂವಿಧಾನಿಕವಾಗಿದ್ದು, SDPI ಹರೇಕಳ ಗ್ರಾಮ ಸಮಿತಿ ಖಂಡಿಸುತ್ತದೆ. ಈ ನೂತನ ಹರಾಜು ನೀತಿ ಸಣ್ಣ ವ್ಯಾಪಾರಿಗಳ ದೈನಂದಿನ ಜೀವನಕ್ಕೆ ಕುತ್ತು ತರುವ ಯೋಜನೆಯಾಗಿರುತ್ತದೆ. ಈ ಹರಾಜು ನೀತಿಯು ಜಾರಿಯಾದಲ್ಲಿ, ಇಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಸಣ್ಣ ವ್ಯಾಪಾರಿಗಳ ಮತ್ತು ಅವರನ್ನು ಅವಲಂಬಿತವಾಗಿರುವ ಕುಟುಂಬದವರ ಬದುಕು ಅತಂತ್ರವಾಗಲಿದೆ ಎಂದು SDPI ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಬಶೀರ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ನೀತಿಯ ವಿರುದ್ದ ಸಾರ್ವಜನಿಕ ಅಭಿಪ್ರಾಯವನ್ನು ಪಡೆದ SDPI ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಬಶೀರ್ ನೇತ್ರತ್ವದಲ್ಲಿ SDPI ಹರೇಕಳದ ನಿಯೋಗ 28/12/2021 ರಂದು ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿ ಹೊಸ ಹರಾಜು ನೀತಿಯನ್ನು ಮರುಪರಿಶೀಲಿಸುವಂತೆ ಹಾಗೂ ಹಿಂದಿನ ನೀತಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ಮನವಿಯನ್ನು ಮಾಡಿದೆ.


ನಿಯೋಗದಲ್ಲಿ SDPI ಮುನ್ನೂರು ಬ್ಲಾಕ್ ಅಧ್ಯಕ್ಷ ಝೈನುದ್ದೀನ್ ಫರೀದ್ ನಗರ, ಗ್ರಾಮ ಪಂಚಾಯತ್ ಜನಪ್ರತಿನಿಧಿ ರೆಹನ ನಝೀರ್, SDPI ಹರೇಕಳ ಗ್ರಾಮ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ, SDPI ದೇರಿಕಟ್ಟೆ ವಾರ್ಡ್ ಸಮಿತಿ ಉಪಾಧ್ಯಕ್ಷ ನಝೀರ್ ಮತ್ತಿತರು ಉಪಸ್ಥಿತರಿದ್ದರು.

ತಮ್ಮ ಮನವಿಗೆ ಪಂಚಾಯತ್ ಅಧಿಕಾರಿಗಳು ಸ್ಪಂದಿಸದೇ, ಯೋಜನೆಯನ್ನು ಮುಂದುವರಿಸುವುದಾದರೇ, SDPI ಹರೇಕಳ ಗ್ರಾಮ ಸಮಿತಿಯು ಸಣ್ಣ ವ್ಯಾಪಾರಿ ಮತ್ತು ಕುಟುಂಬದವರನ್ನು ಸೇರಿಸಿಕೊಂಡು ಅದೇ ರೀತಿ ಹರೇಕಳದ ಜನಸಾಮಾನ್ಯರನ್ನು ಒಗ್ಗೂಡಿಸಿಕೊಂಡು ಹೊಸ ಹರಾಜು ನೀತಿಯ ವಿರುದ್ದ ಪಂಚಾಯತ್ ಮುಂಭಾಗದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.


ನೂತನ ಹರಾಜು ನೀತಿಯ ಪ್ರಕಾರ , ಪಂಚಾಯತ್ ವಾಣಿಜ್ಯ ಕಟ್ಟಡವನ್ನು ಹರಾಜು ಮೂಲಕ ಕೊಂಡುಕೊಳ್ಳುವ ಸಣ್ಣ ವ್ಯಾಪಾರಿಗಳು ಮುಂಗಡವಾಗಿ ಮೂರು ವರ್ಷಗಳ ಬಾಡಿಗೆಯನ್ನು ನೀಡುವುದಾಗಿದೆ.

Join Whatsapp
Exit mobile version