NIA ದಾಳಿ ವಿರೋಧಿಸಿ ಕೇರಳದಲ್ಲಿ ಹರತಾಳ: PFI ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಹೈಕೋರ್ಟ್

Prasthutha|

ಕೊಚ್ಚಿ: ದೇಶದೆಲ್ಲೆಡೆ PFI ಅನ್ನು ಗುರಿಯಾಗಿಸಿ NIA ನಡೆಸಿದ ದಾಳಿಯನ್ನು ಖಂಡಿಸಿ PFI ನಾಯಕರು ಕೇರಳ ಹರತಾಳಕ್ಕೆ ಕರೆ ನೀಡಿದ್ದು, ಇದರ ವಿರುದ್ಧ ಕೇರಳ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಅನುಮತಿ ಇಲ್ಲದೆ ಯಾರೂ ಕೂಡ ರಾಜ್ಯದಲ್ಲಿ ಬಂದ್’ಗೆ ಕರೆ ನೀಡುವಂತಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ಸೂಚಿಸಿದ ಆರೋಪದಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಇತರೆ ಏಜೆನ್ಸಿಗಳು, PFI ಸಂಘಟನೆಯ ಹಲವು ನಾಯಕರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ, ಹಲವರನ್ನು ವಶಕ್ಕೆ ಪಡೆದಿದ್ದವು. ಇದನ್ನು ವಿರೋಧಿಸಿ PFI ಮುಖಂಡರು ಕೇರಳ ಹರತಾಳಕ್ಕೆ ಕರೆ ನೀಡಿದ್ದರು.

- Advertisement -

ಬಂದ್ ವೇಳೆ ಕೇರಳದ ಹಲವು ಕಡೆಗಳಲ್ಲಿ ಹಿಂಸಾಚಾರ ನಡೆದಿದ್ದು, ಕೆ.ಎಸ್.ಆರ್.ಟಿ.ಸಿ ಬಸ್, ಟ್ಯಾಂಕರ್, ಲಾರಿ ಮತ್ತು ಇತರೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿರುವ ಬಗ್ಗೆ ವರದಿಯಾಗಿವೆ.



Join Whatsapp