Home ಕ್ರೀಡೆ ಹರಾರೆ | ಭಾರತದ ಗೆಲುವಿಗೆ 190 ರನ್ ಗುರಿ

ಹರಾರೆ | ಭಾರತದ ಗೆಲುವಿಗೆ 190 ರನ್ ಗುರಿ

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ, 190 ರನ್ ಗಳ ಗೆಲುವಿನ ಗುರಿ ಪಡೆದಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಆತಿಥೇಯ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು. ಆದರೆ ಭಾರತದ ಬಿಗು ಬೌಲಿಂಗ್ ದಾಳಿ ಎದುರು ಪರದಾಡಿದ ಜಿಂಬಾಬ್ವೆ 40.3 ಓವರ್ ಗಳಲ್ಲಿ ಸರ್ವಪತನ ಕಂಡಿದೆ.
ಜಿಂಬಾಬ್ವೆ ನಾಯಕ ರೇಜಿಸ್ ಚಕಬ್ವಾ 35 ರನ್, ಬ್ರಾಂಡ್ ಇವಾನ್ಸ್ 33 ಹಾಗೂ ರಿಚಾರ್ಡ್ ಎನ್ ಗರವಾ 34 ರನ್ ಗಳಿಸಿದರು. ಈ ಮೂವರನ್ನು ಹೊರತುಪಡಿಸಿ ಐವರು ಬ್ಯಾಟ್ಸ್ ಮನ್ ಗಳು ಎರಡಂಕಿಯ ಮೊತ್ತವನ್ನು ತಲುಪಲು ವಿಫಲರಾದರು.
ಭಾರತದ ಪರ ಏಳು ಓವರ್ ಎಸೆದ ದೀಪಕ್ ಚಾಹರ್ 27 ರನ್ ನೀಡಿ ಮೂರು ವಿಕೆಟ್ ಪಡೆದರು. ಪ್ರಸಿದ್ಧ್ ಕೃಷ್ಣ ಹಾಗೂ ಅಕ್ಷರ್ ಪಟೇಲ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.

Join Whatsapp
Exit mobile version