ಮಂಗಳೂರು: ಅಯೋಧ್ಯೆಯಲ್ಲಿ ಇದೇ 22ರಂದು ಏರ್ಪಡಿಸಿರುವ ಶ್ರೀರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಂತೋಷ ವ್ಯಕ್ತಪಡಿಸಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಇದು ನಮ್ಮ ಸಮಾಜ ಹಾಗೂ ದೇಶವನ್ನು ಒಗ್ಗೂಡಿಸುವ ಹಾಗೂ ದೇಶಕ್ಕೆ ಕೀರ್ತಿ ತರುವ ಸಮಾರಂಭ ಆಗಲಿ. ಈ ಕಾರ್ಯಕ್ರಮಕ್ಕೆ ಸಂತೋಷದಿಂದ ಶುಭಾಶಯ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಮುಡಿಪು ಸಮೀಪದ ನರಿಂಗಾನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆ ಪ್ರತಿ ಗ್ರಾಮದಲ್ಲೂ ಸೌಹಾರ್ದ, ಸೋದರತ್ವ, ಪ್ರೀತಿ ವಿಶ್ವಾಸ ನೆಲೆಗೊಳ್ಳಲು ಪ್ರೇರಣೆ ಆಗುವ ಕಾರ್ಯಕ್ರಮ ಆಗಿದೆ ಎಂದಿದ್ದಾರೆ.
ಈ ಸಮಾರಂಭಕ್ಕೆ ಸಮಯಾವಕಾಶ ಸಿಕ್ಕಿದರೆ ಯಾರೂ ಹೋಗಬಹುದು. ಉದ್ಘಾಟನೆ ಸಮಾರಂಭಕ್ಕೆ ಹೋದರೆ ಅದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.