Home ಟಾಪ್ ಸುದ್ದಿಗಳು ಬಿಗ್ ಬಾಸ್ ಶೋನಲ್ಲಿ ಇತಿಹಾಸ ಸೃಷ್ಟಿಸಿದ ಹನುಮಂತು: ಫಿನಾಲೆಗೆ ಎಂಟ್ರಿ

ಬಿಗ್ ಬಾಸ್ ಶೋನಲ್ಲಿ ಇತಿಹಾಸ ಸೃಷ್ಟಿಸಿದ ಹನುಮಂತು: ಫಿನಾಲೆಗೆ ಎಂಟ್ರಿ

ಸಿಕ್ಕಾಪಟ್ಟೆ ಸಿಂಪಲ್ ಆಗಿ ಕಾಣಿಸುವ ಹನುಮಂತ ಸಾಮಾನ್ಯ ವ್ಯಕ್ತಿ ಅಲ್ಲ. ಆಟದಲ್ಲಿ ಅವರ ಚುರುಕುತನಕ್ಕೆ ಯಾರೂ ಸರಿಸಾಟಿ ಇಲ್ಲ.

ಅವರಿಗೆ ಈಗಾಗಲೇ ಅನೇಕರ ಮೆಚ್ಚುಗೆ ಸಿಕ್ಕಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ‘ಬಿಗ್ ಬಾಸ್​ ಕನ್ನಡ 11’ ಕಾರ್ಯಕ್ರಮದ ಫಿನಾಲೆ ಸ್ಪರ್ಧಿಯಾಗಿ ಆಯ್ಕೆ ಆಗಿದ್ದಾರೆ. ಸದ್ಯ ಬಿಗ್ ಬಾಸ್​ ಮನೆಯಲ್ಲಿ ಇರುವ ಇನ್ನುಳಿದ 8 ಘಟಾನುಘಟಿ ಸ್ಪರ್ಧಿಗಳನ್ನೂ ಮೀರಿಸಿ ಹನುಮಂತ ಈ ಸಾಧನೆ ಮಾಡಿದ್ದಾರೆ.

ಟಿಕೆಟ್ ಟು ಫಿನಾಲೆ ರೇಸ್‌ನಲ್ಲಿ ಕೊಟ್ಟ ಟಾಸ್ಕ್‌ ಅನ್ನು ಬಹಳ ಚತುರತೆಯಿಂದ ಮುಗಿಸಿದ ಹನುಮಂತು, ವಿನ್ನರ್ ಆದರು. ಮನೆಯೊಳಗೆ ಆಗಮಿಸಿದ್ದ ನಟ ಶರಣ್ ಮತ್ತು ಅದಿತಿ ಪ್ರಭುದೇವ ಅವರು ಹನುಮಂತುಗೆ ಫಿನಾಲೆ ಟಿಕೆಟ್ ನೀಡಿದರು. ವಿಶೇಷವೆಂದರೆ, ಬಿಗ್ ಬಾಸ್ ಇತಿಹಾಸದಲ್ಲೇ ಈ ರೀತಿ ಮೊದಲ ಹಂತದಲ್ಲೇ ಫಿನಾಲೆ ತಲುಪಿದ ವೈಲ್ಡ್ ಕಾರ್ಡ್ ಸ್ಪರ್ಧಿ ಇವರೇ. ಅಲ್ಲದೇ, ಕನ್ನಡ ಬಿಗ್ ಬಾಸ್‌ನಲ್ಲಿ ಯಾವ ವೈಲ್ಡ್ ಕಾರ್ಡ್ ಸ್ಪರ್ಧಿ ಕೂಡ ಫಿನಾಲೆವರೆಗೂ ಬಂದಿರಲಿಲ್ಲ. ಆದರೆ ಹನುಮಂತು ಆ ಸಾಧನೆ ಮಾಡಿ, ಇತಿಹಾಸ ಸೃಷ್ಟಿಸಿದ್ದಾರೆ.

ಇನ್ನು, ಫಿನಾಲೆ ಟಿಕೆಟ್ ಗೆದ್ದಿದ್ದಕ್ಕಾಗಿ ಹನುಮಂತುಗೆ ಬಿಗ್ ಬಾಸ್ ಒಂದು ಬಂಪರ್ ಗಿಫ್ಟ್ ನೀಡಿದ್ದಾರೆ. “ಹನುಮಂತ, ಟಿಕೆಟ್ ಟು ಫಿನಾಲೆ ಟಾಸ್ಕ್‌ ಗೆದ್ದು, ಈ ಸೀಸನ್‌ 11ರ ಕಡೆಯ ಹಾಗೂ ಅಲ್ಟಿಮೇಟ್ ಕ್ಯಾಪ್ಟನ್ ಆಗಿದ್ದೀರಿ. ಜೊತೆಗೆ ಈ ಸೀಸನ್‌ನ ಮೊಟ್ಟ ಮೊದಲ ಫೈಲಿಸ್ಟ್‌ ಆಗಿ ಫಿನಾಲೆ ವಾರದಲ್ಲಿ ತಮ್ಮ ಸ್ಥಾನವನ್ನು ಖಾತರಿ ಪಡಿಸಿಕೊಂಡಿದ್ದೀರಿ, ನಿಮಗೆ ಅಭಿನಂದನೆಗಳು” ಎಂದು ಬಿಗ್ ಬಾಸ್ ಹೇಳಿದ್ದಾರೆ.

Join Whatsapp
Exit mobile version