Home ಕರಾವಳಿ ಮಂಗಳೂರು: ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಮೇಳಕ್ಕೆ ವುಡ್ ಲ್ಯಾಂಡ್ ನಲ್ಲಿ ಚಾಲನೆ

ಮಂಗಳೂರು: ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಮೇಳಕ್ಕೆ ವುಡ್ ಲ್ಯಾಂಡ್ ನಲ್ಲಿ ಚಾಲನೆ

ಮಂಗಳೂರು: ಜವಳಿ ಸಚಿವಾಲಯ ಹಾಗೂ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಆಯೋಜಿಸಲಾದ ‘ಗಾಂಧಿ ಶಿಲ್ಪ ಬಜಾರ್’ ರಾಷ್ಟ್ರೀಯ ಮಟ್ಟದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಉದ್ಘಾಟಿಸಿದರು.

ಮಾರ್ಚ್ 14ರಿಂದ ಮಾರ್ಚ್ 23ರ ವರೆಗೆ ಹತ್ತು ದಿನಗಳ ಕಾಲ ಕರಕುಶಲ ಮೇಳವು ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿರುವ ವುಡ್ ಲ್ಯಾಂಡ್ ಹೊಟೇಲ್ ನಲ್ಲಿ ನಡೆಯಲಿದೆ.

ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಕರಕುಶಲಗಳ ವಸ್ತುಗಳಿಗೆ ಈಗಲೂ ಬೇಡಿಕೆಯಿದ್ದು, ಅಂತಹ ಬೇಡಿಕೆಗಳನ್ನು ಈಡೇರಿಸಲು ಇಂತಹ ಮೇಳಗಳು ವೇದಿಕೆಯಾಗಲಿ. ತನ್ನದೇ ಗುಣಮಟ್ಟವನ್ನು ಹೊಂದಿರುವ ಕರಕುಶಲ ವಸ್ತುಗಳು ನೈಸರ್ಗಿಕವಾಗಿಯೂ ಅತ್ಯುತ್ತಮವಾದುದು ಎಂದರು.

ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಅಲೆಮಾರಿ- ಅರೆ ಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ವೆಂಕಟೇಶ್ ಮತ್ತಿತ್ತರರು ಉಪಸ್ಥಿತರಿದ್ದರು.    

Join Whatsapp
Exit mobile version