Home ಟಾಪ್ ಸುದ್ದಿಗಳು ತಾಜ್ ಮಹಲ್, ಕುತುಬ್ ಮಿನಾರ್ ಅನ್ನು ಸರ್ಕಾರ ಹಿಂದೂಗಳಿಗೆ ಹಸ್ತಾಂತರಿಸಲಿ ಎಂದ ಕಾಂಗ್ರೆಸ್ ನಾಯಕ

ತಾಜ್ ಮಹಲ್, ಕುತುಬ್ ಮಿನಾರ್ ಅನ್ನು ಸರ್ಕಾರ ಹಿಂದೂಗಳಿಗೆ ಹಸ್ತಾಂತರಿಸಲಿ ಎಂದ ಕಾಂಗ್ರೆಸ್ ನಾಯಕ

ಅಯೋಧ್ಯೆ: ಸರ್ಕಾರವು ವಿಶ್ವ ವಿಖ್ಯಾತ ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಅನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.

ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಆರೋಪದ ಕುರಿತು ಹಿರಿಯ ಕಾಂಗ್ರೆಸ್ ಮುಖಂಡ ಪ್ರಮೋದ್ ಕೃಷ್ಣಂ ಅವರು ಮಾತನಾಡಿ, ಜ್ಞಾನವಾಪಿ ವಿಚಾರವು ಭಾರತದ ನಂಬಿಕೆ ಮತ್ತು ಸಾರ್ವಜನಿಕ ಭಾವನೆಗಳಿಗೆ ಸಂಬಂಧಿಸಿದೆ ಮತ್ತು ನ್ಯಾಯಾಲಯದಲ್ಲಿ ಪರಿಗಣನೆಯಲ್ಲಿದೆ, ಆದರೆ ಇಲ್ಲಿಯವರೆಗೆ ಶಿವಲಿಂಗವನ್ನು ಏಕೆ ಮರೆಮಾಡಲಾಗಿದೆ? ಮತ್ತು ಯಾರು ಮರೆಮಾಡಿದರು? ಎಂಬುದು ಪ್ರಶ್ನೆಯಾಗಿದೆ ಎಂದು ಪ್ರಶ್ನಿಸಿದರು

“ನ್ಯಾಯಾಂಗದ ಯಾವುದೇ ಆದೇಶವನ್ನು ಎಲ್ಲರೂ ಪಾಲಿಸಬೇಕು. ಕುತುಬ್ ಮಿನಾರ್ ಮತ್ತು ತಾಜ್ ಮಹಲ್ ಭಾರತ ಸರ್ಕಾರದ ಅಧೀನದಲ್ಲಿದೆ ಮತ್ತು ಯಾವುದೇ ಧರ್ಮಕ್ಕೆ ಸಂಬಂಧಿಸಿಲ್ಲ, ಆದ್ದರಿಂದ ಸರ್ಕಾರವು ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಅನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಪ್ರಮೋದ್ ಕೃಷ್ಣಂ ಹೇಳಿದರು.

Join Whatsapp
Exit mobile version