ಬ್ರಿಟನ್ನಿನ ಭಾಗವಾದರೂ ಅರೆ ಸ್ವಾಯತ್ತ ದೇಶದ ಸ್ಥಾನಮಾನ ಹೊಂದಿರುವ ಸ್ಕಾಟ್‌ಲ್ಯಾಂಡ್ ಪ್ರಧಾನಿಯಾಗಿ ಇಲ್ಲವೇ ಫಸ್ಟ್ ಮಿನಿಸ್ಟರ್ ಆಗಿ ಪಾಕಿಸ್ತಾನ ಮೂಲದ ಹಂಜಾ ಯೂಸುಫ್ ಅವರು 52% ಮತ ಪಡೆದು ಆಯ್ಕೆಯಾದರು. ಇನ್ನಿಬ್ಬರು ಸ್ಥಾನಾಕಾಂಕ್ಷಿಗಳು ಉಳಿದ ಮತ ಹಂಚಿಕೊಂಡರು.
ನಮ್ಮ ತಾಯ್ನಾಡಿನ ಸೇವೆ ಸಲ್ಲಿಸಲು ಬಣ್ಣ, ಧರ್ಮ ಅಡ್ಡಿಯಾಗದು ಎಂದು ಹೊಸ ಪ್ರಧಾನಿ ಹೇಳಿದರು. ನನ್ನ ಅಜ್ಜ ಅಜ್ಜಿ ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋ ಪ್ರದೇಶಕ್ಕೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಿಂದ ವಲಸೆ ಬಂದಾಗ ನನ್ನ ಮೂರನೆಯ ತಲೆಮಾರು ಈ ಭಾಗದ ಆಡಳಿತ ಹಿಡಿಯುತ್ತದೆ ಎಂದು ಕನಸು ಕೂಡ ಕಂಡಿರಲಿಲ್ಲ ಎಂದು ಯೂಸುಫ್ ಹೇಳಿದರು.
ಎರಡು ಅವಧಿಯಲ್ಲಿ ಎಂಟು ವರುಷ ಪ್ರಧಾನಿ ಆಗಿದ್ದ ನಿಕೋಲಾ ಸ್ಟರ್ಜಿಯೋನ್ ರಾಜೀನಾಮೆ ನೀಡಿದ್ದರಿಂದ ಎಸ್ಎನ್‌ಪಿ- ಸ್ಕಾಟಿಶ್ ನ್ಯಾಷನಲ್ ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡಿತು. ನಂತರ ಆ ನಾಯಕನು ಸ್ಕಾಟ್‌ಲ್ಯಾಂಡ್‌ಗೆ ಸಮಗ್ರ ಸ್ವತಂತ್ರ ತರುವುದಾಗಿ ಹೇಳಿ ಕೊನೆಗೆ ರಾಜೀನಾಮೆ ನೀಡಿದರು.