Home ಆರೋಗ್ಯ ಮಂಗಳೂರಿನಲ್ಲಿ ಹಮ್ದ್ ಹೋಮ್ ಪ್ರಾಡಕ್ಟ್ಸ್ ಮಳಿಗೆ ಇಂದು ಶುಭಾರಂಭ

ಮಂಗಳೂರಿನಲ್ಲಿ ಹಮ್ದ್ ಹೋಮ್ ಪ್ರಾಡಕ್ಟ್ಸ್ ಮಳಿಗೆ ಇಂದು ಶುಭಾರಂಭ

ಮಂಗಳೂರು: ಕಳೆದ ಐದು ವರ್ಷಗಳಿಂದ ರಾಜ್ಯದ ಗ್ರಾಹಕರಿಗೆ ತಾಜಾ ಆಹಾರವನ್ನು ತಲುಪಿಸುತ್ತಿರುವ ಮಂಗಳೂರು ಮೂಲದ ಹಮ್ದ್ ಹೋಮ್ ಪ್ರಾಡಕ್ಟ್ಸ್ ಇದೀಗ 75ಕ್ಕೂ ಹೆಚ್ಚು ಉತ್ಪನ್ನಗಳೊಂದಿಗೆ ತನ್ನ ಮೊದಲ ಮಳಿಗೆಯನ್ನು ಮಂಗಳೂರಿನಲ್ಲಿ ಆರಂಭಿಸಿದ್ದು, ಇಂದು (ಜನವರಿ 16) ಅಧಿಕೃತವಾಗಿ ಶುಭಾರಂಭಗೊಳ್ಳಲಿದೆ.

ಹಮ್ದ್’ದ ಸಂಸ್ಥಾಪಕರು, ವ್ಯವಸ್ಥಾಪಕರು, ನೌಕರರು ಸೇರಿದಂತೆ ಇಡೀ ಸಂಸ್ಥೆಯನ್ನು ಮಹಿಳೆಯರೇ ನಿರ್ವಹಿಸುತ್ತಿರುವುದು ಇದರ ವೈಶಿಷ್ಟತೆಯಾಗಿದ್ದು, ಇದು ಮಹಿಳಾ ಸಬಲೀಕರಣಕ್ಕೆ ಉತ್ತಮ ನಿದರ್ಶನವಾಗಿದೆ.

ನಗರದ ಹೃದಯಭಾಗವಾದ ಫಳ್ನೀರ್ ರಸ್ತೆಯ ಮಿಲೇನಿಯಂ ಟವರ್ಸ್’ನಲ್ಲಿ ಮಳಿಗೆ ಆರಂಭಿಸಲಾಗಿದ್ದು, ಝುಲೇಕಾ ಯೆನಪೋಯ ಸಂಸ್ಥೆಯ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಮರ್ಯಮ್ ಅಂಜುಮ್ ಇಫ್ತಿಕಾರ್ ಸೋಮವಾರ ಸಂಜೆ 4.30ಕ್ಕೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ  ಯುನಾನಿ ವೈದ್ಯೆ ಡಾ.ಆಯಿಶಾ ಸುಹಾ, ಅನುಪಮ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ.  ಆಸರಾ ವುಮೆನ್ಸ್ ಫೌಂಡೇಶನ್ ಅಧ್ಯಕ್ಷೆ ಶಬೀನಾ ಅಕ್ತರ್, ಸ್ತ್ರಿರೋಗ ತಜ್ಞೆ ಡಾ.ದಿಶಾ ಅಜಿಲ, ಸಾಯಿರಾ ಲೋಬೊ, ಕಾರ್ಪೊರೇಟರ್ ಸಂಶಾದ್ ಅಬೂಬಕರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

‘ಆರೋಗ್ಯಕರ ಆಹಾರ, ಆರೋಗ್ಯಕರ ಜೀವನ’ ಎಂಬ ಧ್ಯೇಯವಾಕ್ಯದೊಂದಿಗೆ ನವೋದ್ಯಮಿಗಳಾದ ಶಾಹಿದಾ ಮತ್ತು ಶಾಹಿರಾ ಅವರು ಇದನ್ನು ಆರಂಭಿಸಿದ್ದು,  ಸಾವಯವ, ನೈಸರ್ಗಿಕ, ರಾಸಾಯನಿಕ ಮುಕ್ತ ರುಚಿಕರ ಆಹಾರ ಪದಾರ್ಥಗಳನ್ನು ಅಡುಗೆ ಕೋಣೆಗೆ ತಲುಪಿಸುವ ಗುರಿಯನ್ನು ಕಂಪನಿಯು ಹೊಂದಿದೆ. ವಿವಿಧ ಮಸಾಲೆ ಪುಡಿ ಸೇರಿದಂತೆ ವಿವಿಧ ತಾಜಾ ಆಹಾರ ಪದಾರ್ಥಗಳನ್ನು ಹಮ್ದ್ ತಯಾರಿಸುತ್ತದೆ.   

2018ರಲ್ಲಿ, ನಾವು ಕೇವಲ 20 ಉತ್ಪನ್ನಗಳೊಂದಿಗೆ ಸಣ್ಣ ಕಂಪನಿಯಾಗಿ ಪ್ರಾರಂಭಿಸಿದ್ದೆವು. ಅಂದಿನಿಂದ, ನಮ್ಮ ಕಂಪನಿಯನ್ನು ನಿರಂತರ ಪರೀಕ್ಷೆಗೊಳಪಡಿಸಿ, ಗ್ರಾಹಕರಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶಾಹಿದಾ ಹೇಳುತ್ತಾರೆ. 

ನಮ್ಮ ಉತ್ಪನ್ನಗಳು ಮೊದಲಿಗಿಂತ ಶೀಘ್ರದಲ್ಲಿ ಖಾಲಿಯಾಗುತ್ತಿರುವುದರನ್ನು ಅರಿತುಕೊಂಡು ಇದೀಗ ನಾವು ಹಮ್ಡ್ ಹೋಮ್ ಪ್ರಾಡಕ್ಟ್ಸ್ ಅನ್ನು ಹ್ಯಾಮ್ಡ್ ಹೋಮ್ ಸ್ಟೋರ್’ ಗೆ ನವೀಕರಿಸಲು ನಿರ್ಧರಿಸಿದೆವು. ನಮ್ಮ ಕಂಪನಿಯಿಂದ ಮಾತ್ರವಲ್ಲದೆ ಇತರ ಸಾವಯವ ಉತ್ಪನ್ನಗಳ ಕಂಪನಿಗಳಿಂದ ವಿವಿಧ ಉತ್ಪನ್ನಗಳನ್ನು ನಮ್ಮ ಮಳಿಗೆಯಲ್ಲಿ ಮಾರಾಟಕ್ಕೆ ಇಡಲು ನಿರ್ಧರಿಸಿದೆವು. ಹೆಚ್ಚಿನ ಪಾರದರ್ಶಕತೆಗಾಗಿ ಮತ್ತು ವಿಶ್ವಾಸವನ್ನು ಬೆಳೆಸಲು ನಾವು ಈಗ ಹಮ್ದ್ ಹೋಮ್ ಸ್ಟೋರ್ ಅನ್ನು ತೆರೆದಿದ್ದೇವೆ, ಇದರಲ್ಲಿ ಗ್ರಾಹಕರು ಉತ್ಪನ್ನಗಳನ್ನು ಖರೀದಿಸುವ ಮೊದಲು ಅವುಗಳನ್ನು ನೋಡುವುದನ್ನು ಸುಲಭಗೊಳಿಸಿದ್ದೇವೆ, ಆನ್ ಲೈನ್ ಶಾಪಿಂಗ್ ಸಮಯದಲ್ಲಿ ಆಗಾಗ್ಗೆ ಎದುರಾಗುವ ಅನಾನುಕೂಲತೆಯನ್ನು ತೊಡೆದುಹಾಕಲು ಪ್ರಯತ್ನಿಸಿದ್ದೇವೆ ಎಂದು ಶಾಹಿದಾ ಹೇಳುತ್ತಾರೆ.

Join Whatsapp
Exit mobile version