ಟೊರಂಟೊ: ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದಂತೆಯೇ, ಭಾರತದ ಮೇಲೆ ನಾವು ದಾಳಿ ನಡೆಸುತ್ತೇವೆ ಎಂದು ಖಾಲಿಸ್ಥಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಬೆದರಿಕೆ ಹಾಕಿದ್ದಾನೆ.
ಅಮೆರಿಕ ಮೂಲದ ನಿಷೇಧಿತ ಖಾಲಿಸ್ಥಾನಿ ಉಗ್ರ ಸಂಘಟನೆ ಸಿಕ್ಖ್ ಫಾರ್ ಜಸ್ಟಿಸ್‌ನ ಮುಖ್ಯಸ್ಥ ಪನ್ನುನ್ ಮಂಗಳವಾರ ವೀಡಿಯೋವೊಂದನ್ನು ಹರಿ ಬಿಟ್ಟಿದ್ದು, ಭಾರತ ಪಂಜಾಬ್ ಅನ್ನು ಅತಿಕ್ರಮಿಸುತ್ತಿದೆ. ಅದು ಮುಂದುವರಿದರೆ ಈಗ ಹಮಾಸ್ ನೀಡಿದ ಉತ್ತರವನ್ನೇ ನಾವು ನೀಡಬೇಕಾಗುತ್ತದೆ ಎದಿದ್ಧಾನೆ. ಹೀಗಾದರೆ ಅದಕ್ಕೆ ಭಾರತ ಮತ್ತು ಪ್ರಧಾನಿ ಮೋದಿ ಹೊಣೆ ಯಾಗಬೇಕಾಗುತ್ತದೆ’ ಎಂದೂ ಹೇಳಿದ್ಧಾನೆ.
ಜೋರ್ಡಾನ್‌ನೊಂದಿಗೆ ಟ್ರಾಡೊ ಮಾತುಕತೆ: ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೇದ್‌ರೊಂದಿಗೆ ಭಾರತದ ವಿಚಾರ ಪ್ರಸ್ತಾವಿಸುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಈಗ ಜೋರ್ಡಾನ್ ದೊರೆಯೊಂದಿಗಿನ ಮಾತುಕತೆ ವೇಳೆಯೂ ಇದೇ ಚಾಳಿ ಮುಂದುವರಿಸಿದ್ದಾರೆ.
“ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾ ಬಿನ್ ಅಲ್-ಹುಸೇನ್ ಅವರೊಂದಿಗೆ ಜಸ್ಟಿನ್ ಟ್ರಾಡೊ ಮಾತುಕತೆ ನಡೆಸಿದಾಗ, ಭಾರತ-ಕೆನಡಾ ನಡುವಿನ ಸಂಬಂಧದ ಸದ್ಯದ ಸ್ಥಿತಿ-ಗತಿ ಕುರಿತು ಮಾಹಿತಿ ನೀಡಿದ್ದಲ್ಲದೇ, ಕಾನೂನು ಮತ್ತು ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದವನ್ನು ಗೌರವಿಸುವ ಪ್ರಾಮುಖ್ಯವನ್ನು ಒತ್ತಿ ಹೇಳಿದ್ದಾರೆ’ ಎಂದು ಕೆನಡಾ ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಾರತ ಈ ಬೆಳವಣೆಗೆಯನ್ನು ಹೇಗೆ ಕಾಣುತ್ತದೆ ಎಂದು ಕಾದುನೋಡಬೇಕಾಗಿದೆ.