Home ಜಾಲತಾಣದಿಂದ ಹಲಾಲ್‌, ಹಿಜಾಬ್‌ ಮುಂತಾದವುಗಳು ಚುನಾವಣೆ ವಿಷಯವೇ ಅಲ್ಲ, ಜನ ಅದನ್ನು ಮರೆತುಬಿಟ್ಟಿದ್ದಾರೆ ಎಂದ ಸಿಎಂ ಬೊಮ್ಮಾಯಿ

ಹಲಾಲ್‌, ಹಿಜಾಬ್‌ ಮುಂತಾದವುಗಳು ಚುನಾವಣೆ ವಿಷಯವೇ ಅಲ್ಲ, ಜನ ಅದನ್ನು ಮರೆತುಬಿಟ್ಟಿದ್ದಾರೆ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ಹಲಾಲ್‌, ಹಿಜಾಬ್‌ ಮುಂತಾದವುಗಳು ಚುನಾವಣೆ ವಿಷಯವೇ ಅಲ್ಲ, ಜನ ಅದನ್ನು ಮರೆತುಬಿಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂಗ್ಲಿಷ್‌ ಸುದ್ದಿ ವಾಹಿನಿ ಇಂಡಿಯಾ ಟುಡೆಯೊಂದಿಗೆ ನಡೆಸಿದ ಸಂವಾದದಲ್ಲಿ ಬೊಮ್ಮಾಯಿ ಈ ರೀತಿ ಹೇಳಿದ್ದಾರೆ.

ಹಲಾಲ್, ಹಿಜಾಬ್, ಈಗ ಚುನಾವಣಾ ವಿಷಯವೇ ಅಲ್ಲ. ಈಗ ಎಲ್ಲವೂ ಮುಗಿದು ಹೊಗಿದೆ. ರಾಜ್ಯದ ಜನರೇ ಅದನ್ನು ಮರೆತಿದ್ದಾರೆ. ‌ಕರ್ನಾಟಕದಲ್ಲಿ ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ‌ ಇವೆ ಎಂದರು.

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಶಿಕಾರಿಪುರದಲ್ಲಿ  ಟಿಪ್ಪು, ಸಾವರ್ಕರ್, ಹಿಜಾಬ್, ಹಲಾಲ್ ಇಂತಹ ವಿಷಯಗಳ ವಿವಾದಗಳನ್ನು ನಾನು ಬೆಂಬಲಿಸಲು ಹೋಗುವುದಿಲ್ಲ. ಪಕ್ಷದ ಇತರ ನಾಯಕರು ಇಂತಹ ಸಮಸ್ಯೆಗಳನ್ನು ಬೆಂಬಲಿಸಿದರೆ ಅದು ಸರಿಯಲ್ಲ. ನಾನು ಅವರ ಜೊತೆ ಮಾತನಾಡಿ ಆ ರೀತಿ ಮಾತನಾಡದಂತೆ ಎಚ್ಚರಿಕೆ ನೀಡುತ್ತೇನೆ ಎಂದು ಹೇಳಿದ್ದರು

ಇದೀಗ ಇದೇ ರೀತಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Join Whatsapp
Exit mobile version