ಈ ವರ್ಷದ ಹಜ್ ಗೆ ವಯೋಮಿತಿಯನ್ನು ಕೈಬಿಟ್ಟ ಕೇಂದ್ರ ಹಜ್ ಸಮಿತಿ

Prasthutha|

ಹೊಸದಿಲ್ಲಿ: 2022ರ ಹಜ್ ಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯನ್ನು ಕೇಂದ್ರ ಹಜ್ ಸಮಿತಿ ಕೈಬಿಟ್ಟಿದೆ.

- Advertisement -

ಪೂರ್ವನಿರ್ಧರಿತ ವಯಸ್ಸಿನ ಮಿತಿ 65 ವರ್ಷಗಳು. ಇದನ್ನು ಕೈಬಿಟ್ಟ ನಂತರ 70 ವರ್ಷ ಮೇಲ್ಪಟ್ಟವರಿಗೂ ಕೂಡ ಮೊದಲಿನಂತೆ ಮೀಸಲು ವರ್ಗದಲ್ಲಿ ಅರ್ಜಿ ಸಲ್ಲಿಸಬಹುದು.

ಮೀಸಲಾತಿ ವಿಭಾಗದಲ್ಲಿ ಅರ್ಜಿ ಸಲ್ಲಿಸಿದವರೊಂದಿಗೆ ಒಬ್ಬರು ಸಹಾಯಕರಾಗಿ ಇರಬೇಕು. 70 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ವ್ಯಕ್ತಿಗಳು ಜೊತೆಯಲ್ಲಿದ್ದರೆ ಇಬ್ಬರು ಸಹಾಯಕರನ್ನು ಅನುಮತಿಸಲಾಗುತ್ತದೆ. ಜೊತೆಯಲ್ಲಿ ಪತ್ನಿ, ಪತಿ, ಸಹೋದರರು, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಸಹಾಯಕರಾಗಿ ಅನುಮತಿಸಲಾಗುವುದು.

- Advertisement -

ಸಹಾಯಕರಾಗಿ ಇರುವವರು ಅವರ ಸಂಬಂಧವನ್ನು ಸಾಬೀತುಪಡಿಸಲು ಸಾಕಷ್ಟು ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಮೀಸಲಾತಿ ವರ್ಗದಲ್ಲಿ ಅರ್ಜಿ ಸಲ್ಲಿಸಿದ 70 ವರ್ಷದ ವ್ಯಕ್ತಿ ಯಾತ್ರೆಯನ್ನು ಕೈಬಿಟ್ಟರೆ ಜೊತೆಯಲ್ಲಿರುವ ಸಹಾಯಕನ ಪ್ರಯಾಣವನ್ನು ಸಹ ರದ್ದುಗೊಳಿಸಲಾಗುವುದು. ಅರ್ಜಿದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಲ್ಲಿ, ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

Join Whatsapp