Home ರಾಜ್ಯ ಮಡಿಕೇರಿ: ಕೂದಲು ತಿನ್ನುತ್ತಿದ್ದ ಮಹಿಳೆ | ಹೊಟ್ಟೆಯಲ್ಲಿ ಬೆಳೆದದ್ದೇನು ಗೊತ್ತೇ ?

ಮಡಿಕೇರಿ: ಕೂದಲು ತಿನ್ನುತ್ತಿದ್ದ ಮಹಿಳೆ | ಹೊಟ್ಟೆಯಲ್ಲಿ ಬೆಳೆದದ್ದೇನು ಗೊತ್ತೇ ?

ಮಡಿಕೇರಿ: ತನ್ನ ಕೂದಲನ್ನು ಕಿತ್ತು ತಿನ್ನುತ್ತಿದ್ದ ಮಹಿಳೆಯ ಹೊಟ್ಟೆಯಲ್ಲಿ ಬೆಳೆದ ಒಂದೂವರೆ ಕೆಜಿಯ ಕೂದಲಿನ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ವೈದ್ಯರು ಹೊರತೆಗೆದಿದ್ದಾರೆ. ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಸ್ಕ್ಯಾನಿಂಗ್ ಗೆ ಒಳಪಡಿಸಲಾಗಿತ್ತು. ಸ್ಕ್ಯಾನಿಂಗ್ ರಿಪೋರ್ಟ್ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಕೂದಲಿನ ಗಡ್ಡೆ ಪತ್ತೆಯಾಗಿದೆ.

ಮಹಿಳೆಯು ತನ್ನ ಕೂದಲನ್ನು ಕಿತ್ತು ತಿನ್ನುತ್ತಿದ್ದ ಪರಿಣಾಮ ಹೊಟ್ಟೆಯಲ್ಲಿ ಒಂದೂವರೆ ಕೆಜಿ ತೂಕದ ಕೂದಲಿನ ಗಡ್ಡೆ ಬೆಳೆದಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾಗಳ ಸಂಸ್ಥೆ ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ವೈದ್ಯ ಅಜಿತ್ ಕುಮಾರ್ ನೇತೃತ್ವದ ವೈದ್ಯರ ತಂಡ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.


ಸದ್ಯ ಮಹಿಳೆಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ರೀತಿಯ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Join Whatsapp
Exit mobile version