Home ಟಾಪ್ ಸುದ್ದಿಗಳು ಗ್ಯಾನ್’ವಾಪಿ ಮಸೀದಿ ಸರ್ವೇಕ್ಷಣೆ ಕೋಮು ಸಾಮರಸ್ಯ ಹಾಳು ಮಾಡುವ ಪ್ರಯತ್ನ: ಮಸೀದಿಯ ಆಡಳಿತ ಸಮಿತಿ

ಗ್ಯಾನ್’ವಾಪಿ ಮಸೀದಿ ಸರ್ವೇಕ್ಷಣೆ ಕೋಮು ಸಾಮರಸ್ಯ ಹಾಳು ಮಾಡುವ ಪ್ರಯತ್ನ: ಮಸೀದಿಯ ಆಡಳಿತ ಸಮಿತಿ

ನವದೆಹಲಿ: ಕೋಮು ಸೌಹಾರ್ದವನ್ನು ಹಾಳು ಮಾಡಲು ಬೇಕೆಂದೇ ಗ್ಯಾನ್ ವಾಪಿ ಮಸೀದಿಯ ಒಳ ಸರ್ವೆ ನಡೆಸಲಾಗಿದೆ. ಇದು ಆರಾಧನಾ ಸ್ಥಳದ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮಸೀದಿ ಸಮಿತಿಯು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.


ಸರ್ವ ಧರ್ಮ ಸಾಮರಸ್ಯ ಮತ್ತು ಶಾಂತಿ ಕದಡುವ ಹುನ್ನಾರವಲ್ಲದೆ ಆರಾಧನಾ ಸ್ಥಳದ ಕಾಯ್ದೆಯನ್ನು ಬೇಕೆಂದೇ ಉಲ್ಲಂಘನೆ ಮಾಡಲಾಗಿದೆ ಎಂದು ಅಂಜುಮಾನ್ ಇಂತೆಜಾಮಿಯಾ ಮಸೀದಿ ನಿರ್ವಹಣಾ ಸಮಿತಿಯು ಸುಪ್ರೀಂ ಕೋರ್ಟಿನಲ್ಲಿ ತನ್ನ ವಾದ ಮಂಡಿಸಿತು. ಕೆಲವೇ ಹಿಂದೂಗಳ ಕೋರಿಕೆಯಂತೆ ಗ್ಯಾನ್ ವಾಪಿ ಮಸೀದಿಯ ಸರ್ವೇಕ್ಷಣೆಗೆ ಆಜ್ಞಾಪಿಸಿದ್ದನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆಯು ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ.


ವಾರಣಾಸಿ ಕೋರ್ಟು ಗ್ಯಾನ್ ವಾಪಿ ಮಸೀದಿ ಒಳ ಸರ್ವೆಗೆ ಆದೇಶ ಮಾಡಿರುವುದ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನಲ್ಲಿ ತಡೆ ಕೋರಿ ಸಲ್ಲಿಸಿದ ಅರ್ಜಿಗೆ ಮಾನ್ಯತೆ ಸಿಗಲಿಲ್ಲ. ಆ ಕಾರಣಕ್ಕಾಗಿ ಅರ್ಜಿದಾರರು ಸುಪ್ರೀಂ ಕೋರ್ಟು ಮೆಟ್ಟಿಲು ಹತ್ತಿದ್ದಾರೆ. ಕಾಶಿ ವಿಶ್ವನಾಥ ಆಲಯ ವಲಯದ ಮಸೀದಿ ಸರ್ವೇಕ್ಷಣೆ ಒಂದು ರೀತಿಯಲ್ಲಿ ನಡೆದಿದೆ.


ಅರ್ಜಿದಾರರು ಶುಕ್ರವಾರ ತುರ್ತಾಗಿ ವಿಚಾರಣೆ ಆಗಬೇಕು ಎಂದು ಕೋರಿದಾಗ ಸಿಜೆಐ ಎನ್. ವಿ. ರಮಣ ಅವರು ಜಸ್ಟಿಸ್ ಡಿ. ವೈ. ಚಂದ್ರಚೂಡ ನೇತೃತ್ವದ ನ್ಯಾಯ ಪೀಠಕ್ಕೆ ಈ ಮೊಕದ್ದಮೆಯನ್ನು ವಹಿಸಿದ್ದರು. ಆದರೆ ವಿಚಾರಣಾ ದಿನಾಂಕ ಸೂಚಿಸಿರಲಿಲ್ಲ.
ವಾರಣಾಸಿ ಗ್ಯಾನ್ ವಾಪಿ ಮಸೀದಿ ಜಾಗದ ಬಗ್ಗೆ ವಿವಾದವಿದ್ದು ಈ ಬಗೆಗಿನ ಪ್ರಕರಣವು 1991ರಿಂದ ಕೋರ್ಟಿನಲ್ಲಿದೆ. ಮೊಗಲ್ ಸಾಮ್ರಾಟ ಔರಂಗಜೇಬ್, ಕಾಶಿ ವಿಶ್ವನಾಥ ಮಂದಿರದ ಭಾಗವನ್ನು ಒಡೆದು ಗ್ಯಾನ್ ವಾಪಿ ಮಸೀದಿ ಕಟ್ಟಿಸಿದ್ದಾನೆ ಎಂದು ದೂರಿ ಕೆಲವು ಭಕ್ತರು 1991ರಲ್ಲಿ ಕೋರ್ಟು ಕಟ್ಟೆ ಹತ್ತಿದ್ದರು.


2021ರಲ್ಲಿ ಮಹಿಳಾ ಭಕ್ತೆಯೊಬ್ಬರು ವಾರಣಾಸಿ ಕೋರ್ಟಿನಲ್ಲಿ ದಾವೆ ಹೂಡಿ ಹಳೆಯ ವಿಶ್ವನಾಥ ಮಂದಿರ ಗ್ಯಾನ್ ವಾಪಿ ಮಸೀದಿ ಸ್ಥಳದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದರು. ವಾರಣಾಸಿ ಕೋರ್ಟ್ ಮತ್ತು ಅಲಹಾಬಾದ್ ಹೈಕೋರ್ಟಿನಲ್ಲಿ 1991ರಿಂದಲೂ ಹಿಂದೂ ಮತ್ತು ಮುಸ್ಲಿಮರ ಹಲವಾರು ಅರ್ಜಿಗಳು ಈ ಸಂಬಂಧ ಇರುವುದರಿಂದ ಈಗ ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ಕಟ್ಟೆಗೆ ತಲುಪಿದೆ. 1991ರ ದಾವೆಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿತ್ತು.

Join Whatsapp
Exit mobile version