Home ಕರಾವಳಿ ಗುರುಪುರ: ಕೈಕಂಬ ಅಂಡರ್ ಪಾಸ್ ಕಾಮಗಾರಿ ವಿರೋಧಿಸಿ ಪಂಚಾಯತ್‌ಗಳಿಗೆ SDPI ಮನವಿ

ಗುರುಪುರ: ಕೈಕಂಬ ಅಂಡರ್ ಪಾಸ್ ಕಾಮಗಾರಿ ವಿರೋಧಿಸಿ ಪಂಚಾಯತ್‌ಗಳಿಗೆ SDPI ಮನವಿ

ಗುರುಪುರ: ಕೈಕಂಬ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಕಾಮಗಾರಿಯನ್ನು ಸ್ಥಗಿತಗೊಳಿಸಿ ಚತುಷ್ಪಥ ಫ್ಲೈಓವರ್ ಸೇತುವೆಯನ್ನು ನಿರ್ಮಿಸಬೇಕು. ಈ ಕುರಿತು ಗ್ರಾಮ ಪಂಚಾಯತ್‌ನಲ್ಲಿ ನಿರ್ಣಯ ಕೈಗೊಳ್ಳಲು ಒತ್ತಾಯಿಸಿ ಗುರುಪುರ, ಕಂದಾವರ, ಪಡುಪೆರಾರ ಮತ್ತು ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಿಗೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಎಸ್‌ಡಿಪಿಐ ಗುರುಪುರ ಬ್ಲಾಕ್ ಸಮಿತಿ ಅದ್ಯಕ್ಷ ಅಶ್ರಫ್ ಕೈಕಂಬ, ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಎ.ಕೆ.ರಿಯಾಝ್ ಅಡ್ಡೂರು, ಶಾಹೀಕ್ ಅಡ್ಡೂರು, SDPI ಕೈಕಂಬ ಬ್ಲಾಕ್ ಕಾರ್ಯದರ್ಶಿ ಇರ್ಶಾದ್ ಅಡ್ಡೂರು, ಬ್ಲಾಕ್ ಸಮಿತಿ ಸದಸ್ಯ ಇಮ್ತಿಯಾಝ್ ಅಡ್ಡೂರು ಉಪಸ್ಥಿತರಿದ್ದರು

Join Whatsapp
Exit mobile version