Home ಟಾಪ್ ಸುದ್ದಿಗಳು ತೆರೆದ ಸ್ಥಳದಲ್ಲಿ ನಮಾಝ್ ವಿರೋಧಿಸಿ ಹಿಂದುತ್ವವಾದಿಗಳಿಂದ ಪ್ರತಿಭಟನೆ

ತೆರೆದ ಸ್ಥಳದಲ್ಲಿ ನಮಾಝ್ ವಿರೋಧಿಸಿ ಹಿಂದುತ್ವವಾದಿಗಳಿಂದ ಪ್ರತಿಭಟನೆ

ನವದೆಹಲಿ: ಹರ್ಯಾಣದ ಗುರ್ಗಾಂವ್ ನಲ್ಲಿ ಸ್ಥಳೀಯ ನಿವಾಸಿಗಳು ಸಾರ್ವಜನಿಕ ತೆರೆದ ಸ್ಥಳದಲ್ಲಿ ನಮಾಝ್ ನಿರ್ವಹಣೆ ಮಾಡಿದ್ದನ್ನು ವಿರೋಧಿಸಿ ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಮಾತ್ರವಲ್ಲ ಸಾರ್ವಜನಿಕ ಸ್ಥಳದಲ್ಲಿ ನಮಾಝ್ ನಿರ್ವಹಿಸಿದ ಕ್ರಮವನ್ನು ಖಂಡಿಸಿ ಸ್ಥಳದಲ್ಲಿ ಜಮಾಯಿಸಿದ ಹಿಂದುತ್ವವಾದಿಗಳು ನಮಾಝ್ ಮಾಡಿದವರ ಗುರುತಿನ ಚೀಟಿಯನ್ನು ಪರಿಶೀಲನೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಈ ಮಧ್ಯೆ ಹೊರಗಿನಿಂದ ಆಗಮಿಸಿದವರು ಇಲ್ಲಿನ ಭದ್ರತೆಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ.

Join Whatsapp
Exit mobile version